ನವದೆಹಲಿ: ಫಾಸ್ಟ್ಟ್ಯಾಗ್ ಬಳಕೆದಾರರಿಗೆ ಅನುಕೂಲವಾಗಲು ಹಾಗೂ ಒಟ್ಟಾರೆ ಗ್ರಾಹಕರ ಅನುಭವವನ್ನು ಸುಧಾರಿಸಲು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ಕೆವೈವಿ ( ನೊ ಯುವರ್ ವೆಹಿಕಲ್) ಪ್ರಕ್ರಿಯೆಯನ್ನು ಸರಳಗೊಳಿಸಿದೆ.
.‘ರಾಜ್ಮಾರ್ಗ್ಯಾತ್ರಾ’ ಆ್ಯಪ್ ಮೂಲಕ ವಾರ್ಷಿಕ ಫಾಸ್ಟ್ಟ್ಯಾಗ್ ಉಡುಗೊರೆಗೆ ಅವಕಾಶ.
ಭಾರತದ ಹೆದ್ದಾರಿ ನಿರ್ವಹಣಾ ಕಂಪನಿ ನಿಯಮಿತ (ಐಎಚ್ಎಂಸಿಎಲ್) ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ಬಳಕೆದಾರರು ನಿಯಮ ಪಾಲಿಸದೇ ಇದ್ದರೆ ಫಾಸ್ಟ್ಟ್ಯಾಗ್ ಸೇವೆಗಳನ್ನು ನಿಲ್ಲಿಸಲಾಗುವುದಿಲ್ಲ. ಬದಲಿಗೆ ಕೆವೈವಿ ಪ್ರಕ್ರಿಯೆ ಪೂರ್ಣಗೊಳಿಸಲು ಬೇಕಾದಷ್ಟು ಅವಕಾಶ ನೀಡಲಾಗುತ್ತದೆ ಎಂದು ಎನ್ಎಚ್ಎಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
.ಬಂಡಿಪುರ ಅರಣ್ಯ: ಹಸಿರುಸುಂಕ ವಸೂಲಿಗೆ ಫಾಸ್ಟ್ಟ್ಯಾಗ್ .
ಕೆವೈವಿ ಮಾರ್ಗಸೂಚಿಗಳನ್ನು ಸರಳಗೊಳಿಸಲಾಗಿದ್ದು, ಕಾರು, ಜೀಪ್ ಹಾಗೂ ವ್ಯಾನ್ಗಳ ಬದಿಯ ಚಿತ್ರಗಳು ಅಪ್ಲೋಡ್ ಮಾಡಬೇಕಿಲ್ಲ. ನಂಬರ್ ಪ್ಲೇಟ್ ಹಾಗೂ ಫಾಸ್ಟ್ಟ್ಯಾಗ್ ಕಾಣಿಸುವ ಹಾಗೆ ವಾಹನದ ಮುಂಭಾಗದ ಚಿತ್ರ ಅಪ್ಲೋಡ್ ಮಾಡಿದರೆ ಸಾಕು. ಅಲ್ಲದೆ ವಾಹನ, ಚಾಸಿ ಅಥವಾ ಮೊಬೈಲ್ ಸಂಖ್ಯೆ ನಮೂದು ಮಾಡಿದರೆ ಆರ್.ಸಿ ಮಾಹಿತಿಗಳನ್ನು ‘ವಾಹನ್’ ವೆಬ್ಸೈಟ್ನಿಂದ ಸ್ವಯಂಚಾಲಿತವಾಗಿ ಪಡೆದುಕೊಳ್ಳುತ್ತದೆ. ಒಂದೇ ಮೊಬೈಲ್ ನಂಬರ್ನಲ್ಲಿ ಹಲವು ವಾಹನಗಳು ನೋಂದಣಿಯಾಗಿದ್ದರೆ ವಾಹನವನ್ನು ಆಯ್ಕೆ ಮಾಡಿ, ಕೆವೈವಿಯನ್ನು ಪೂರ್ಣಗೊಳಿಸಬಹುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
.FASTag: ಟೋಲ್ನಲ್ಲಿ ಯುಪಿಐ ಬಳಸಿದರೆ ಶುಲ್ಕ ಕಡಿಮೆ!.
ಅಡಚಣೆ ರಹಿತವಾಗಿ ಸೇವೆಗಳನ್ನುನೀಡುವ ಸಲುವಾಗಿ, ಕಳೆದುಹೋದರೆ ಅಥವಾ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರು ಬರದ ಹೊರತು ಕೆವೈವಿಗಿಂತ ಮೊದಲು ನೀಡಲಾದ ಫಾಸ್ಟ್ಟ್ಯಾಗ್ಗಳು ಸೇವೆಗಳನ್ನು ಕಡಿತಗೊಳಿಸಲಾಗುವುದಿಲ್ಲ. ಕೆವೈವಿಯನ್ನು ಪೂರ್ಣಗೊಳಿಸಲು ಫಾಸ್ಟ್ಟ್ಯಾಗ್ ವಿತರಿಸಿದ ಬ್ಯಾಂಕ್ ಎಸ್ಎಂಎಸ್ ಕಳುಹಿಸಲಿದೆ.

ಯಾವುದೇ ಕಾರಣದಿಂದಾಗಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಲು ಗ್ರಾಹಕರು ವಿಫಲವಾದಲ್ಲಿ, ಸೇವೆಯನ್ನು ನಿಲ್ಲಿಸುವ ಮೊದಲು ಫಾಸ್ಟ್ಟ್ಯಾಗ್ ವಿತರಿಸಿದ ಬ್ಯಾಂಕ್ಗಳು ಈ ಬಗ್ಗೆ ಗ್ರಾಹಕರಿಗೆ ನೆರವು ನೀಡಬೇಕು. ಕೆವೈವಿ ಸಂಬಂಧ ಯಾವುದೇ ದೂರುಗಳಿದ್ದರೆ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ ಸಂಖ್ಯೆ 1033ಗೆ ಕರೆ ಮಾಡಬಹುದು.
.ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಶೇ 19.6ರಷ್ಟು ಹೆಚ್ಚಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.