ಲಖನೌ: ಉತ್ತರ ಪ್ರದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ಐಐಟಿ ಕೋಚಿಂಗ್ ಸಂಸ್ಥೆ ಎಫ್ಐಐಟಿಜೆಇಇಯ ಹಲವು ಕೇಂದ್ರಗಳು ಮುಚ್ಚಿದ್ದು, ಇಲ್ಲಿ ಶಿಕ್ಷಣ ಪಡೆಯುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

ವೇತನ ಪಾವತಿ ಮಾಡದ ಕಾರಣ ಹಲವಾರು ಶಿಕ್ಷಕರು ರಾಜೀನಾಮೆ ನೀಡಿರುವುದು ಸಂಸ್ಥೆಯ ಹಲವು ಕೇಂದ್ರಗಳು ಬಾಗಿಲು ಮುಚ್ಚಲು ಕಾರಣ ಎಂದು ಮೂಲಗಳು ತಿಳಿಸಿವೆ.

ಮೀರತ್, ವಾರಾಣಸಿ, ಲಖನೌ, ಗಾಜಿಯಾಬಾದ್ ಮತ್ತು ನೊಯಿಡಾದಲ್ಲಿರುವ ಕೇಂದ್ರಗಳು ಮುಚ್ಚಿವೆ ಎಂದು ವರದಿಯಾಗಿದೆ. ಕೆಲವು ಕಡೆಗಳಲ್ಲಿ ಪೋಷಕರು ಎಫ್ಐಐಟಿಜೆಇಇ ಕೇಂದ್ರಗಳ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ.

‘ಕಳೆದ ಐದು ತಿಂಗಳಿನಿಂದ ವೇತನ ಪಾವತಿಯಾಗದ್ದರಿಂದ ಬಹುತೇಕ ಶಿಕ್ಷಕರು ರಾಜೀನಾಮೆ ನೀಡದ್ದಾರೆ. ವೇತನದ ಭರವಸೆ ನೀಡಿದರೂ ಆಡಳಿತ ಮಂಡಳಿ ಇನ್ನೂ ಪಾವತಿಸಿಲ್ಲ. ಕೆಲವು ಕಡೆ ಕೇಂದ್ರಗಳು ಕಾರ್ಯಾಚರಿಸುತ್ತಿರುವ ಕಟ್ಟಡದ ಬಾಡಿಗೆಯನ್ನೂ ನೀಡಿಲ್ಲ’ ಎಂದು ಮೀರತ್ ಕೇಂದ್ರದ ಸಂಸ್ಥೆಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.