ನವದೆಹಲಿ: ಡೆಂಗಿ ಜ್ವರಕ್ಕೆ ಲಸಿಕೆಯನ್ನು ಅಭಿವೃದ್ಧಿಪಡಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಪನೇಸಿಯಾ ಬಯೋಟೆಕ್ ಕಂಪನಿ ಮೂರನೆಯ ಹಂತದ ವೈದ್ಯಕೀಯ ಪರೀಕ್ಷೆಯನ್ನು ಇದೇ ಮೊದಲ ಬಾರಿಗೆ ಆರಂಭಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಬುಧವಾರ ಹೇಳಿದೆ.
ಪನೇಸಿಯಾ ಬಯೋಟೆಕ್ ಕಂಪನಿಯು ‘ಡೆಂಗಿಆಲ್’ ಲಸಿಕೆಯನ್ನು ದೇಶದಲ್ಲೇ ಅಭಿವೃದ್ಧಿಪಡಿಸಿದೆ. ಮೂರನೆಯ ಹಂತದ ಪರೀಕ್ಷೆಯ ಮೊದಲ ಲಸಿಕೆಯನ್ನು ವ್ಯಕ್ತಿಯೊಬ್ಬರಿಗೆ ರೋಹಟಕ್‌ನ ಪಂಡಿತ್ ಭಾಗವತ್ ದಯಾಳ್ ಶರ್ಮ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬುಧವಾರ ನೀಡಲಾಗಿದೆ.
ಮೂರನೆಯ ಹಂತದ ವೈದ್ಯಕೀಯ ಪರೀಕ್ಷೆಯನ್ನು 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 19 ಕಡೆಗಳಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ 10,335ಕ್ಕೂ ಹೆಚ್ಚು ಮಂದಿ ವಯಸ್ಕರು ಭಾಗಿಯಾಗುತ್ತಿದ್ದಾರೆ.
‘ಇದು ಲಸಿಕೆ ಸಂಶೋಧನೆ ಹಾಗೂ ಅಭಿವೃದ್ಧಿ ಕೆಲಸದಲ್ಲಿ ಭಾರತ ಹೊಂದಿರುವ ಸಾಮರ್ಥ್ಯವನ್ನು ತೋರಿಸುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
ಸದ್ಯಕ್ಕೆ ಭಾರತದಲ್ಲಿ ಡೆಂಗಿ ಜ್ವರಕ್ಕೆ ಮಾನ್ಯತೆ ಇರುವ ಲಸಿಕೆ ಲಭ್ಯವಿಲ್ಲ. ಈ ಲಸಿಕೆಯ ಮೊದಲ ಹಾಗೂ ಎರಡನೆಯ ಹಂತಗಳ ವೈದ್ಯಕೀಯ ಪರೀಕ್ಷೆಗಳನ್ನು 2018–19ರಲ್ಲಿ ನಡೆಸಲಾಗಿದೆ. ಆಗ ದೊರೆತ ಫಲಿತಾಂಶವು ಭರವಸೆ ಮೂಡಿಸುವಂತೆ ಇದೆ ಎಂದು ಸಚಿವಾಲಯ ಹೇಳಿದೆ.
ದೇಶದಲ್ಲೇ ಅಭಿವೃದ್ಧಿಪಡಿಸಲಾಗಿರುವ ಡೆಂಗಿ ಲಸಿಕೆಯ ಮೂರನೆಯ ಹಂತದ ವೈದ್ಯಕೀಯ ಪರೀಕ್ಷೆ ಆರಂಭವಾಗುತ್ತಿರುವುದು ಡೆಂಗಿ ವಿರುದ್ಧದ ನಮ್ಮ ಹೋರಾಟದಲ್ಲಿ ಮಹತ್ವದ ಮುನ್ನಡೆ