ನವದೆಹಲಿ: ವಿಮಾನ ಪ್ರಯಾಣಿಕರು ಇನ್ನು ಮುಂದೆ ಟಿಕೆಟ್ ಕಾಯ್ದಿರಿಸಿದ 48 ಗಂಟೆಗಳ ಒಳಗಾಗಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಿಕೆಟ್ಗಳನ್ನು ರದ್ದುಗೊಳಿಸಲು ಅಥವಾ ಬದಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
.ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1 .
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ವಿಮಾನಯಾನ ಸಂಸ್ಥೆಗಳ ಟಿಕೆಟ್ ಮರುಪಾವತಿ ನಿಯಮಗಳನ್ನು ಪರಿಷ್ಕರಿಸಿದ್ದು, ಈ ಸೌಲಭ್ಯವು ಕೆಲವು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

ನಿಗದಿತ ಪ್ರಯಾಣದ ದಿನಾಂಕಕ್ಕಿಂತ 7 ದಿನಗಳಿಗಿಂತ ಕಡಿಮೆ ಅವಧಿ ಇರುವ ದೇಶೀಯ ವಿಮಾನ ಬುಕ್ಕಿಂಗ್ಗಳಿಗೆ ಮತ್ತು 15 ದಿನಗಳಿಗಿಂತ ಕಡಿಮೆ ಅವಧಿ ಇರುವ ಅಂತರರಾಷ್ಟ್ರೀಯ ವಿಮಾನ ಬುಕ್ಕಿಂಗ್ಗಳಿಗೆ ಇದು ಅನ್ವಯಿಸುವುದಿಲ್ಲ.

ವಿಮಾನಯಾನ ಸಂಸ್ಥೆಯ ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿದ್ದಲ್ಲಿ, ಹೆಸರಿನಲ್ಲಿ ಆಗಿರುವ ತಪ್ಪುಗಳನ್ನು ಬುಕ್ಕಿಂಗ್ ಮಾಡಿದ 24 ಗಂಟೆಗಳ ಒಳಗಾಗಿ ತಿಳಿಸಿದರೆ, ಅಂತಹ ತಿದ್ದುಪಡಿಗಳಿಗೆ ವಿಮಾನಯಾನ ಸಂಸ್ಥೆಗಳು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು ಎಂದು ಡಿಜಿಸಿಎ ತಿಳಿಸಿದೆ.

ಟ್ರಾವೆಲ್ ಏಜೆಂಟ್ ಅಥವಾ ಪೋರ್ಟಲ್ ಮೂಲಕ ಟಿಕೆಟ್ ಖರೀದಿಸಿದರೆ, ಮರುಪಾವತಿಯ ಜವಾಬ್ದಾರಿಯು ವಿಮಾನಯಾನ ಸಂಸ್ಥೆಗಳದ್ದೇ ಆಗಿರುತ್ತದೆ. ವಿಮಾನಯಾನ ಸಂಸ್ಥೆಗಳು ಮರುಪಾವತಿ ಪ್ರಕ್ರಿಯೆಯನ್ನು 14 ಕೆಲಸದ ದಿನಗಳ ಒಳಗೆ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಡಿಜಿಸಿಎ ಹೇಳಿದೆ.
.PV Web Exclusive | ಸುಳ್ವಾಡಿ ವಿಷಪ್ರಾಶನ ದುರಂತಕ್ಕೆ 7 ವರ್ಷ; ಈಡೇರದ ಬೇಡಿಕೆ.
ತುರ್ತು ವೈದ್ಯಕೀಯ ಪರಿಸ್ಥಿತಿಗಳ ಕಾರಣದಿಂದಾಗಿ ಟಿಕೆಟ್ ರದ್ದುಗೊಳಿಸುವ ನಿಯಮಗಳಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ.

ಸಕಾಲದಲ್ಲಿ ಮರುಪಾವತಿ ದೊರೆಯುತ್ತಿಲ್ಲ ಎಂದು ಪ್ರಯಾಣಿಕರಿಂದ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 'ಸಾರ್ವಜನಿಕ ಸಾರಿಗೆ ಸಂಸ್ಥೆಗಳ ವಿಮಾನ ಪ್ರಯಾಣಿಕರಿಗೆ ಟಿಕೆಟ್ ಮರುಪಾವತಿ'ಗೆ ಸಂಬಂಧಿಸಿದ ನಾಗರಿಕ ವಿಮಾನಯಾನ ಅಗತ್ಯತೆಗಳ (ಸಿಎಆರ್) ನಿಯಮಗಳಿಗೆ ಈ ತಿದ್ದುಪಡಿಗಳನ್ನು ತರಲಾಗಿದೆ.

ಡಿಸೆಂಬರ್ 2025ರಲ್ಲಿ ಇಂಡಿಗೋ ವಿಮಾನಗಳ ಸಂಚಾರದಲ್ಲಿ ಉಂಟಾದ ವ್ಯತ್ಯಯದ ಸಮಯದಲ್ಲಿ ಟಿಕೆಟ್ ಮರುಪಾವತಿ ವಿಳಂಬದ ಸಮಸ್ಯೆ ತೀವ್ರವಾಗಿ ಚರ್ಚೆಗೆ ಬಂದಿತ್ತು. ಆ ಸಮಯದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ನಿಗದಿತ ಅವಧಿಯೊಳಗೆ ಮರುಪಾವತಿಯನ್ನು ಪೂರ್ಣಗೊಳಿಸುವಂತೆ ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಿತ್ತು.
.ಚಿತ್ರದುರ್ಗ: ಪ್ರ‘ಭಾರ’ದಿಂದ ನಲುಗುತ್ತಿದೆ ಆರೋಗ್ಯ ಸೇವೆ.
ಪರಿಷ್ಕೃತ ನಿಯಮಾವಳಿಗಳನ್ನು (ಸಿಎಆರ್) ಫೆಬ್ರವರಿ 24 ರಂದು ಹೊರಡಿಸಲಾಗಿದೆ.

ವಿಮಾನ ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣಿಕರಿಗೆ 48 ಗಂಟೆಗಳ ಕಾಲ 'ಲುಕ್-ಇನ್ ಆಯ್ಕೆ' (Look-in option) ನೀಡುವಂತೆ ಈಗ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಈ ಅವಧಿಯಲ್ಲಿ ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಿಕೆಟ್ ರದ್ದುಗೊಳಿಸಬಹುದು ಅಥವಾ ತಿದ್ದುಪಡಿ ಮಾಡಬಹುದು. ಆದರೆ, ಟಿಕೆಟ್ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಅನ್ವಯವಾಗುವ ಸಾಮಾನ್ಯ ವಿಮಾನ ಪ್ರಯಾಣ ದರವನ್ನು ಮಾತ್ರ ಪಾವತಿಸಬೇಕಾಗುತ್ತದೆ.

ಆರಂಭಿಕ ಬುಕ್ಕಿಂಗ್ ಸಮಯದಿಂದ 48 ಗಂಟೆಗಳ ನಂತರ ಈ ಆಯ್ಕೆಯು ಲಭ್ಯವಿರುವುದಿಲ್ಲ ಮತ್ತು ಅಂತಹ ಸಂದರ್ಭದಲ್ಲಿ ಪ್ರಯಾಣಿಕರು ತಿದ್ದುಪಡಿಗಾಗಿ ನಿಗದಿತ ರದ್ದತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ತುರ್ತು ವೈದ್ಯಕೀಯ ಪರಿಸ್ಥಿತಿಯಿಂದಾಗಿ ಟಿಕೆಟ್ ರದ್ದುಗೊಳಿಸುವ ಪ್ರಮೇಯ ಬಂದರೆ, ಅಂದರೆ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕ ಅಥವಾ ಅದೇ ಪಿಎನ್ಆರ್ ಸಂಖ್ಯೆಯಲ್ಲಿ ಹೆಸರಿಸಲಾದ ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಾದಲ್ಲಿ, ವಿಮಾನಯಾನ ಸಂಸ್ಥೆಗಳು ಹಣವನ್ನು ಮರುಪಾವತಿಸಬಹುದು ಅಥವಾ 'ಕ್ರೆಡಿಟ್ ಶೆಲ್' ಸೌಲಭ್ಯವನ್ನು ನೀಡಬಹುದು.

ವಿಮಾನಯಾನ ಸಂಸ್ಥೆಯ ಏರೋಸ್ಪೇಸ್ ಮೆಡಿಸಿನ್ ತಜ್ಞರು ಅಥವಾ ಡಿಜಿಸಿಎ ಪಟ್ಟಿಯಲ್ಲಿರುವ ಏರೋಸ್ಪೇಸ್ ಮೆಡಿಸಿನ್ ತಜ್ಞರಿಂದ ಪ್ರಯಾಣಿಕರ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ಬಂದ ನಂತರವೇ ಮರುಪಾವತಿಯನ್ನು ನೀಡಲಾಗುತ್ತದೆ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
.ಒಳನೋಟ: ಮುಕ್ಕಾದ ಇತಿಹಾಸದ ಕೊಂಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.