ನಿನ್ನೆ (ಶುಕ್ರವಾರ) ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿರೋಧ ಪಕ್ಷವು ರಾಷ್ಟ್ರಧ್ವಜವನ್ನು ಪಕ್ಷದ ಧ್ವಜದ ಕೆಳಗೆ ಇರಿಸುವ ಮೂಲಕ ಅವಮಾನಿಸಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ಅನ್ನು ಗೋವಾ ಸಿಎಂ ಟೀಕಿಸಿದ್ದಾರೆ.
'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ನಮ್ಮ ರಾಷ್ಟ್ರವನ್ನು ಪದೇ ಪದೇ ಅವಮಾನಿಸುತ್ತಿದೆ. ರಾಮಮಂದಿರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸುವ ಮೂಲಕ ಹಾಗೂ ಗೋವಾದಲ್ಲಿ ರಾಷ್ಟ್ರ ಧ್ವಜದ ಮೇಲೆ ಪಕ್ಷದ ಧ್ವಜವನ್ನು ಹಾರಿಸುವ ಮೂಲಕ ನಮ್ಮ ದೇಶವನ್ನು ಅವಮಾನಿಸಿದೆ. ಈ ದೇಶ ವಿರೋಧಿ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಬಿಜೆಪಿ ಗೋವಾ ಘಟಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಗಾಂಧಿ ಕುಟುಂಬ ಮೊದಲು, ಪಕ್ಷ ಎರಡನೆಯದು ಹಾಗೂ ರಾಷ್ಟ್ರ ಕೊನೆಗೆ ಎಂಬ ನಂಬಿಕೆ ಹೊಂದಿರುವುದನ್ನು ಕಾಂಗ್ರೆಸ್ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಗೋವಾ ಸಿಎಂ ಸಾವಂತ್ ಟೀಕಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ದಿವ್ಯಾ ಕುಮಾರ್, ಅಜಾಗರೂಕತೆಯಿಂದಾಗಿ ಸ್ತಂಭದಲ್ಲಿ ತ್ರಿವರ್ಣ ಧ್ವಜವನ್ನು ಕಾಂಗ್ರೆಸ್ ಧ್ವಜದ ಕೆಳಗೆ ಇರಿಸಲಾಗಿದೆ. ಈ ಉದ್ದೇಶಪೂರ್ವಕವಲ್ಲದ ತಪ್ಪಿಗೆ ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದ್ದಾರೆ.