ನವದೆಹಲಿ: ಅರಣ್ಯ ಹಕ್ಕು ಕಾಯ್ದೆ (ಎಫ್ಆರ್ಎ) 2006ರ ಅಡಿಯಲ್ಲಿ ಭೂಮಿಯ ಹಕ್ಕುಗಳನ್ನು ನೀಡಿರುವುದು ಅರಣ್ಯ ನಾಶಕ್ಕೆ ಕಾರಣವಾಗಿದೆ ಎಂಬ ಹೇಳಿಕೆಯನ್ನು ಸಮರ್ಥಿಸುವ ವೈಜ್ಞಾನಿಕ ಪುರಾವೆಗಳನ್ನು ಒದಗಿಸುವಂತೆ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಕೇಂದ್ರ ಪರಿಸರ ಸಚಿವಾಲಯವನ್ನು ಕೇಳಿಕೊಂಡಿದೆ.

‘ಅರಣ್ಯ ನಾಶಕ್ಕೆ ಕಾರಣವಾಗಿರುವ ಹಲವಾರು ಅಂಶಗಳಲ್ಲಿ ಎಫ್ಆರ್ಎ ಅಡಿಯಲ್ಲಿ ಜಮೀನಿನ ಹಕ್ಕುಗಳನ್ನು ನೀಡಿರುವುದೂ ಸೇರಿದೆ ಎಂದು ಭಾರತದ ಅರಣ್ಯ ಸ್ಥಿತಿಗತಿಯ ವಾರ್ಷಿಕ ವರದಿ (ಐಎಸ್ಎಫ್ಆರ್) ತಿಳಿಸಿದೆ. ಇದನ್ನು ಸಾಬೀತುಪಡಿಸಲು ಪರಿಸರ ಸಚಿವಾಲಯವು ವಿವರವಾದ ವೈಜ್ಞಾನಿಕ ಪುರಾವೆಗಳನ್ನು ಒದಗಿಸಬೇಕು’ ಎಂದು ಬುಡಕಟ್ಟು ವ್ಯವಹಾರಗಳ ಸಚಿವಲಯವು ಜುಲೈ 2ರಂದು ಬರೆದ ಪತ್ರದಲ್ಲಿ ಕೋರಿದೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಈ ಪತ್ರವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಕೇಂದ್ರ ಪರಿಸರ ಸಚಿವಾಲಯ ಎಫ್ಆರ್ಎಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಅಕ್ಷೇಪಿಸಿ 150ಕ್ಕೂ ಹೆಚ್ಚು ಅರಣ್ಯ ಹಕ್ಕು ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಚೆಗೆ ಪತ್ರ ಬರೆದಿದ್ದವು. ಇದೀಗ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಕೂಡಾ ವಿವರಣೆ ಕೇಳಿದೆ ಎಂದಿದ್ದಾರೆ.

‘ಅರಣ್ಯ ಹಕ್ಕು ಕಾಯ್ದೆ ಅಡಿ ನೀಡಿರುವ ಹಕ್ಕುಪತ್ರಗಳು ಅರಣ್ಯ ನಾಶಕ್ಕೆ ಕಾರಣ’ ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ನೀಡಿರುವ ಹೇಳಿಕೆಗೆ ಸ್ಪಷ್ಟನೆ ಕೋರಿ ಅರಣ್ಯ ಹಕ್ಕು ಸಂಘಟನೆಗಳು ಪತ್ರ ಬರೆದಿದ್ದವು.

ಆದರೆ ಅರಣ್ಯ ಸಚಿವಾಲಯವು ಶುಕ್ರವಾರ ಹೇಳಿಕೆ ಬಿಡುಗಡೆಗೊಳಿಸಿ, ಯಾದವ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿತ್ತು.

‘ಯಾದವ್ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ನಿರೂಪಿಸಲಾಗಿದೆ. ಅವರ ಹೇಳಿಕೆಯ ಒಂದು ತುಣುಕನ್ನು ಮಾತ್ರ ಪ್ರಸಾರ ಮಾಡಿ, ತಪ್ಪು ಅರ್ಥ ಧ್ವನಿಸುವಂತೆ ಮಾಡಲಾಗಿದೆ’ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.