ಬುಧವಾರ ಮಧ್ಯರಾತ್ರಿ 12.30ರ ವೇಳೆಗೆ ಘಟನೆ ನಡೆದಿದ್ದು, ಮಹಿಳೆಯು ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಕಾರು ಆಕಸ್ಮಿಕವಾಗಿ ದಾರಿಹೋಕರೊಬ್ಬರಿಗೆ ತಾಗಿದೆ. ಈ ವೇಳೆ ಅವನ ಸ್ನೇಹಿತರು ಕಾರಿನಲ್ಲಿದ್ದ ಇಬ್ಬರಿಗೆ ಹಲ್ಲೆ ನಡೆಸಿದ್ದಾರೆ. ಮಹಿಳೆಯ ಬಟ್ಟೆ ಎಳೆದು ಕಿರುಕುಳ ನೀಡಿದ್ದಾರೆ ಎಂದು ಎಫ್.ಐ.ಆರ್.ನಲ್ಲಿ ಹೇಳಲಾಗಿದೆ.