ಇಂಫಾಲ್: ಮಣಿಪುರದ ವಿವಿಧ ನಿಷೇಧಿತ ಸಂಘಟನೆಗೆ ಸೇರಿದ ನಾಲ್ವರು ಬಂಡುಕೋರರನ್ನು ಭದ್ರತಾ ಪಡೆಗಳು ಬಂಧಿಸಿವೆ.

ನಿಷೇಧಿತ ಎನ್ಎಸ್ಸಿಎನ್ (ನಿಕಿ ಸುಮಿ) ಸಂಘಟನೆಯ ಸಕ್ರಿಯ ಸದಸ್ಯನೊಬ್ಬನನ್ನು ಜಿರಿಬಾಮ್ ಜಿಲ್ಲೆಯ ಕಾಮ್ರಂಗ ಗ್ರಾಮದಲ್ಲಿ ಗುರುವಾರ ಬಂಧಿಸಲಾಗಿದೆ. ಆತ ಅಪಹರಣ ಮತ್ತು ದರೋಡೆ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ’ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಕಾಕ್ಚಿಂಗ್ ಜಿಲ್ಲೆಯಲ್ಲಿ ನಿಷೇಧಿತ ಪಿಎಲ್ಎ ಸಂಘಟನೆಗೆ ಸೇರಿದ ಒಬ್ಬ ಬಂಡುಕೋರನನ್ನು ಬಂಧಿಸಲಾಗಿದೆ. ಮ್ಯಾನ್ಮಾರ್ ಗಡಿಭಾಗದಲ್ಲಿನ ಟೆಂಗ್ನೌಪಲ್ ಜಿಲ್ಲೆಯಲ್ಲಿ ಪ್ರಿಪಾಕ್(ಪ್ರೊ) ಮತ್ತು ಪಿಎಲ್ಎ ಸಂಘಟನೆಗೆ ಸೇರಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಂಡುಕೋರರ ನಿಗ್ರಹಕ್ಕಾಗಿ ಭದ್ರತಾ ಪಡೆಗಳು ಮಣಿಪುರದ ಹಲವೆಡೆ ಕಾರ್ಯಾಚರಣೆ ನಡೆಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.