ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಪುರ್‌ಗೆ ಬೆದರಿಕೆ ಬಗ್ಗೆ ಜಾತ್ಯತೀತ ಉದಾರವಾದಿಗಳು ಮೌನ: ಗೌತಮ್‌ ಗಂಭೀರ್‌

ಅಕ್ಷರ ಗಾತ್ರ

ನವದೆಹಲಿ: ಮಾಜಿ ಬಿಜೆಪಿ ವಕ್ತಾರೆ ನೂಪರ್‌ ಶರ್ಮಾ ಅವರಿಗೆ ಒಡ್ಡಲಾಗಿರುವ ಬೆದರಿಕೆಗಳ ಬಗ್ಗೆ ಜಾತ್ಯತೀತಉದಾರವಾದಿಗಳು ಮೌನವಾಗಿದ್ದಾರೆ ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಿವಿ ಸಂವಾದವೊಂದರಲ್ಲಿ ಪ್ರವಾದಿ ಮಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿ ನೂಪರ್‌ ಶರ್ಮಾ ಅವರಿಗೆ ಕೊಲೆ ಬೆದರಿಕೆಗಳು ಕೇಳಿಬಂದಿರುವ ಹಿನ್ನೆಲೆ ಗೌತಮ್‌ ಗಂಭೀರ್‌ ಟ್ವೀಟ್‌ ಮಾಡಿದ್ದಾರೆ.

'ಈಗಾಗಲೇ ಕ್ಷಮೆ ಕೇಳಿರುವ ಓರ್ವ ಮಹಿಳೆ ವಿರುದ್ಧ ರಾಷ್ಟ್ರದಾದ್ಯಂತ ಕೊಲೆ ಬೆದರಿಕೆಗಳು ಮತ್ತು ದ್ವೇಷ ಕಾರುವ ಸಂದೇಶಗಳು ವ್ಯಕ್ತವಾಗುತ್ತಿದ್ದರೂ ಜಾತ್ಯತೀತಉದಾರವಾದಿಗಳು ಎಂದು ಹೇಳಿಕೊಳ್ಳುವವರು ಮೌನವಾಗಿದ್ದಾರೆ. ಇದು ನಿಜಕ್ಕೂ ಕಿವುಡುತನ' ಎಂದು ಗಂಭೀರ್‌ ಹೇಳಿದ್ದಾರೆ.

ಎಐಎಂಐಎಂ ಸಂಸದ ಇಮ್ತಿಯಾಜ್‌ ಜಲೀಲ್‌ ಇತ್ತೀಚೆಗೆ ನೂಪುರ್‌ ಶರ್ಮಾ ಅವರನ್ನು ಗಲ್ಲಿಗೇರಿಸಬೇಕು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT