ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆಯುವ ಗಂಗಾಸಾಗರ ಮೇಳದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದು, ಭಾರಿ ಜನದಟ್ಟಣೆ ಉಂಟಾಗಿದೆ.

ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಗಂಗಾನದಿ ಮತ್ತು ಬಂಗಾಳಕೊಲ್ಲಿಯ ಸಂಗಮ ಸ್ಥಾನದಲ್ಲಿ ಲಕ್ಷಾಂತರ ಭಕ್ತರು ಪ್ರವಿತ್ರ ಸ್ನಾನ ಮಾಡಿದರು.
.ಮಕರ ಸಂಕ್ರಾಂತಿ: ನಾಡಿನ ಜನತೆಗೆ ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರ ಶುಭಾಶಯ.Sankranti 2026: ಸಂಕ್ರಾಂತಿ ಹಬ್ಬಕ್ಕೆ ಮಾಡುವ ಅಡುಗೆಯಲ್ಲಿದೆ ಆರೋಗ್ಯದ ರಹಸ್ಯ.
ಶಾಹಿ ಸ್ನಾನದ ಸಮಯ ಮಧ್ಯಾಹ್ನ ಶುರುವಾಗಲಿದೆ. ಆದರೆ ಈಗಾಗಲೇ ಲಕ್ಷಾಂತರ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಪ್ರತಿ ವರ್ಷ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳು ಸೇರಿದಂತೆ ಕೋಲ್ಕತ್ತದ ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೇಳಿದರು.
.ಪ್ರತಿನಿತ್ಯವೂ ಆತ್ಮವಿಶ್ವಾಸದಿಂದಿರಲು ಈ ಸೂತ್ರಗಳನ್ನು ಪಾಲಿಸಿ.ಗಲಭೆ ಪೀಡಿತ ಇರಾನ್ನಲ್ಲಿ ಸ್ಟಾರ್ಲಿಂಕ್ನಿಂದ ಉಚಿತ ಇಂಟರ್ನೆಟ್ ಸೇವೆ.
ಮೊದಲ ಬಾರಿಗೆ ರಕ್ಷಣಾ ಡ್ರೋನ್ಗಳನ್ನು ಕಣ್ಗಾವಲುಗಾಗಿ ನಿಯೋಜಿಸಲಾಗಿದೆ. ಈ ಡ್ರೋನ್ಗಳ ಸಹಾಯದಿಂದ ಕಪಿಲ ಮುನಿ ಆಶ್ರಮ ಮತ್ತು ಮುಖ್ಯ ಸ್ನಾನ ಘಟ್ಟಗಳ ಸುತ್ತಲೂ ಮೇಲ್ವಿಚಾರಣೆಯನ್ನು ನಡೆಸಲಾಗುತ್ತದೆ. ಈ ರಕ್ಷಣಾ ಡ್ರೋನ್ಗಳು 100 ಕೆ.ಜಿವರೆಗೆ ಭಾರವನ್ನು ಹೊತ್ತೊಯ್ಯುವ ಮತ್ತು ಸಂಕಷ್ಟದಲ್ಲಿರುವ ಯಾತ್ರಿಕರನ್ನು ತ್ವರಿತವಾಗಿ ಸ್ಥಳಾಂತರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ಜನರು ಈ ಮೇಳಕ್ಕೆ ಆಗಮಿಸಿದ್ದಾರೆ. ಕುಂಭಮೇಳದ ನಂತರ ಇದೇ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಎನ್ನಲಾಗಿದೆ.
.ಕಾಶ್ಮೀರದ ಎಲ್ಒಸಿ ಉದ್ದಕ್ಕೂ ಪಾಕ್ ಡ್ರೋನ್ಗಳಿಗೆ ‘ಗುಂಡಿಟ್ಟ’ ಭಾರತೀಯ ಸೇನೆ.ಮಕರ ಸಂಕ್ರಾಂತಿ ನಂತರ ಈ 5 ರಾಶಿಯವರಿಗೆ ದೈವಿಕ ಬಲ; ವಿವಾಹ ಯೋಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.