ನವದೆಹಲಿ (ಪಿಟಿಐ): ಪ್ರವಾಹ, ಚಂಡಮಾರುತ ಸೇರಿ ಪ್ರಾಕೃತಿಕ ವಿಕೋಪಗಳನ್ನು ಮುಂದಾಗಿ ಗ್ರಹಿಸಲು ಭೂಚಲನೆಯ ಗತಿ ಅವಲೋಕಿಸುವ ‘ಇಒಎಸ್–03’ ಉಪಗ್ರಹವನ್ನು 2021ನೇ ಮೂರನೇ ತ್ರೈಮಾಸಿಕದಲ್ಲಿ ಉಡಾವಣೆ ಮಾಡಲಾಗುತ್ತದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದು, ಇಒಎಸ್–03 ಉಪಗ್ರಹವು ದೇಶದ ಭೌಗೋಳಿಕ ವ್ಯಾಪ್ತಿಯನ್ನು ದೈನಿಕ 4–5 ಬಾರಿ ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಪ್ರಾಕೃತಿಕ ವಿಕೋಪಗಳನ್ನು ಹೊರತುಪಡಿಸಿ ಉಪಗ್ರಹವು ಜಲಮೂಲಗಳು, ಬೆಳೆ, ಅರಣ್ಯ ಪ್ರದೇಶಗಳ ನಾಶ, ಬೆಳವಣಿಗೆಗಳನ್ನು ಗಮನಿಸಿ, ಮಾಹಿತಿಗಳನ್ನು ಕಲೆಹಾಕಲಿದೆ ಎಂದು ತಿಳಿಸಿದರು.

ಜತೆಗೆ ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಸಣ್ಣ ಉಪಗ್ರಹ ಉಡಾವಣಾ ವಾಹಕದ (ಎಸ್ಎಸ್‌ಎಲ್‌ವಿ) ಪ್ರಯೋಗ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.