ನವದೆಹಲಿ: ಪುಣೆ ಮೂಲದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ (ಎಸ್ಐಐ) ಕೋವಿಶೀಲ್ಡ್ ಲಸಿಕೆಯ 4.5 ಕೋಟಿ ಡೋಸ್ಗಳನ್ನು ಮತ್ತೆ ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರತಿ ಡೋಸ್ಗೆ ₹ 200ರಂತೆ ಖರೀದಿಸಲಾಗುತ್ತಿದ್ದು, ಏಪ್ರಿಲ್ ವೇಳೆಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವುದು ಎಂದು ಮೂಲಗಳು ತಿಳಿಸಿವೆ. ಸದ್ಯ, ಕೇಂದ್ರ ಸರ್ಕಾರದ ಬೇಡಿಕೆಯಂತೆ, ಎಸ್ಐಐ ಕೋವಿಶೀಲ್ಡ್ನ 1.1 ಕೋಟಿ ಡೋಸ್ ಪೂರೈಕೆ ಮಾಡಲಿದೆ.

ಪ್ರತಿ ಡೋಸ್ ಲಸಿಕೆಯ ಮೂಲ ಬೆಲೆ ₹ 200 ಇದ್ದು, ₹ 10 ಜಿಎಸ್ಟಿ ಸೇರಿ ಒಟ್ಟು ಪ್ರತಿ ಡೋಸ್ನ ಬೆಲೆ ₹ 210 ಆಗುವುದು. ಹೀಗಾಗಿ ಈಗ ಸಲ್ಲಿಕೆಯಾಗಿರುವ ಬೇಡಿಕೆಯಂತೆ ಎಸ್ಐಐ ₹ 231 ಕೋಟಿ ಮೌಲ್ಯದ 1.1 ಕೋಟಿ ಡೋಸ್ ಲಸಿಕೆಯನ್ನು ಪೂರೈಸಲಿದೆ.

ಸಾರ್ವಜನಿಕ ವಲಯದ ಎಚ್ಎಲ್ಎಲ್ ಲೈಫ್ಕೇರ್ ಲಿ.ಗೆ ಈ ಲಸಿಕೆಯನ್ನು ಪೂರೈಕೆ ಮಾಡುವ ಜವಾಬ್ದಾರಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.