ನವದೆಹಲಿ: ಸಮುದ್ರ ಮಟ್ಟದಿಂದ 5,500 ಮೀಟರ್ ಎತ್ತರದ ಪ್ರದೇಶಗಳ ಮೇಲೆ ಹಗಲು-ರಾತ್ರಿ ನಿರಂತರವಾಗಿ ಕಣ್ಗಾವಲು ವಹಿಸುವ ಸಾಮರ್ಥ್ಯದ ಸಾಧನಗಳನ್ನು ಒಳಗೊಂಡ ಸುಮಾರು 1,000 ಕಣ್ಗಾವಲು ಹೆಲಿಕಾಪ್ಟರ್ಗಳ ಖರೀದಿ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ.

‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ದ ಸ್ಫೂರ್ತಿ ಮೇರೆಗೆ ಅತ್ಯಂತ ಎತ್ತರದ ಪ್ರದೇಶಗಳ ಮೇಲೆ ಕಣ್ಗಾವಲು ವಹಿಸಲು ಸಾಮರ್ಥ್ಯವಿರುವ ಸಾಧನಗಳನ್ನು ಒಳಗೊಂಡ ಕಣ್ಗಾವಲು ಹೆಲಿಕಾಪ್ಟರ್ ಖರೀದಿಸಲಾಗುವುದು ಎಂದು ಹೆಲಿಕಾಪ್ಟರ್ ಪೂರೈಸುವ ಕಂಪನಿಗೆ ಸಲ್ಲಿಸಲಾದ ದಾಖಲೆಗಳಲ್ಲಿ (ಆರ್ಎಫ್ಐ) ತಿಳಿಸಲಾಗಿದೆ.

ರಕ್ಷಣಾ ಸಚಿವಾಲಯವು ಸುಮಾರು 1,000 ಕಣ್ಗಾವಲು ಹೆಲಿಕಾಪ್ಟರ್ಗಳನ್ನು ಖರೀದಿಸುವ ಉದ್ದೇಶ ಹೊಂದಿದೆ. ಅತಿ ಎತ್ತರದ ಪ್ರದೇಶಗಳ ಮೇಲೆ ಕಣ್ಗಾವಲು ವಹಿಸುವ ಸಾಮರ್ಥ್ಯದ ಹೆಲಿಕಾಪ್ಟರ್ಗಳನ್ನು ಪೂರೈಸಬಹುದಾದ ಭಾರತೀಯ ವರ್ತಕರನ್ನು ಗುರುತಿಸಲಾಗುತ್ತಿದೆ ಎಂದು ಆರ್ಎಫ್ಐ ದಾಖಲೆಗಳಲ್ಲಿ ತಿಳಿಸಲಾಗಿದೆ.

ಜೊತೆಗೆ ಬಂಡೆಗಲ್ಲುಗಳನ್ನು ಕೊರೆಯಲು 50 ಬೃಹತ್ ಯಂತ್ರಗಳ ಖರೀದಿಗೆ ಭಾರತೀಯ ಸೇನೆ ಯೋಜಿಸಿದೆ. ಉತ್ತರ, ಪೂರ್ವ ಸೇರಿದಂತೆ ಇನ್ನಿತರ ಕೆಲವು ಪ್ರದೇಶಗಳನ್ನು ತಲುಪಲು ಸೇನೆಗೆ ದುಸ್ತರವಾಗಿದೆ. ಹೀಗಾಗಿ, ಈ ಪ್ರದೇಶಗಳಲ್ಲಿ ಸುಸ್ಥಿರ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಕಡಿಮೆ ಕಾಲಾವಧಿಯಲ್ಲಿ ನಿಗದಿತ ಕಾರ್ಯಾಚರಣೆ ಗುರಿ ತಲುಪಲು ಸೇನೆ ಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.