ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈನಲ್ಲಿ ಭಾರಿ ಮಳೆ: ಉಪನಗರ ರೈಲು ಸೇವೆಗೆ ಅಡಚಣೆ

Published 8 ಜುಲೈ 2024, 2:39 IST
Last Updated 8 ಜುಲೈ 2024, 2:39 IST
ಅಕ್ಷರ ಗಾತ್ರ

ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈ ಮತ್ತು ಅದರ ಉಪನಗರಗಳಲ್ಲಿ ರಾತ್ರಿಯಿಡೀ ಭಾರಿ ಮಳೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಭಾರಿ ಮಳೆಯಿಂದ ಉಪನಗರ ರೈಲು ಸೇವೆ, ವಿಶೇಷವಾಗಿ ಕೇಂದ್ರ ರೈಲ್ವೆ ಸೇವೆಗೆ ಅಡಚಣೆ ಉಂಟಾಗಿದೆ. ಮತ್ತೊಂದೆಡೆ ಪುಣೆ-ಮುಂಬೈ ಡೆಕ್ಕನ್ ಕ್ವೀನ್ ರೈಲು ಸೇವೆಯನ್ನು ಭಾರಿ ಮಳೆಯ ಕಾರಣ ದಿನದ ಮಟ್ಟಿಗೆ ರದ್ದುಗೊಳಿಸಲಾಗಿದೆ.

ಭಾರಿ ಟ್ರಾಫಿಕ್‌ ಜಾಮ್‌ನಿಂದಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಮುಂಬೈ ಅಲ್ಲದೆ, ಮುಂಬೈ ಮಹಾನಗರ ಪ್ರದೇಶದ ಜಿಲ್ಲೆಗಳಾದ ಥಾಣೆ, ಪಾಲ್ಘರ್ ಮತ್ತು ರಾಯಗಢ ಹಾಗೂ ದಕ್ಷಿಣ ಕೊಂಕಣ ಅವಳಿ ಜಿಲ್ಲೆಗಳಾದ ರತ್ನಗಿರಿ ಮತ್ತು ಸಿಂಧುದುರ್ಗದಲ್ಲಿ ಕೂಡ ಭಾರಿ ಮಳೆಯಾಗಿದೆ. ರತ್ನಗಿರಿಯಲ್ಲಿ ಕೆಲವು ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT