ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ ಸಿಎಂ KCR ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ; ಲ್ಯಾಂಡಿಂಗ್ ಸುರಕ್ಷಿತ

Published 6 ನವೆಂಬರ್ 2023, 9:34 IST
Last Updated 6 ನವೆಂಬರ್ 2023, 9:34 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರಿದ್ದ ಹೆಲಿಕಾಪ್ಟರ್‌, ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಹಾರಾಟ ನಡೆಸಿದ ಕೆಲವೇ ಕ್ಷಣಗಳಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಚುನಾವಣಾ ಪ್ರಚಾರಕ್ಕಾಗಿ ತಮ್ಮ ಫಾರ್ಮ್‌ಹೌಸ್‌ನಿಂದ ದೇವರಕಾದ್ರಕ್ಕೆ ಹೊರಟಿದ್ದ ಕೆಸಿಆರ್‌ ಅವರನ್ನು ಹೊತ್ತ ಹೆಲಿಕಾಪ್ಟರ್‌ ಹಾರಾಟ ನಡೆಸಿದ 10 ನಿಮಿಷಗಳಲ್ಲಿ ಮರಳಿ ಮೂಲ ಸ್ಥಾನಕ್ಕೆ ಬಂದಿಳಿದಿದೆ. ಟೇಕ್‌ಆಫ್‌ ಹಂತದಲ್ಲಿ ಎದುರಾದ ತಾಂತ್ರಿಕ ದೋಷ ಅರಿತ ಪೈಲಟ್‌, ಹಾರಾಟ ಆರಂಭಿಸಿದ ಸ್ಥಳಕ್ಕೆ ಮರಳಲು ನಿರ್ಧರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಹಾರಾಟ ನಡೆಸಿದ ಸ್ಥಳಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಚಂದ್ರಶೇಖರ ರಾವ್, ಪೈಲಟ್ ಹಾಗೂ ಸಹ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮುಖ್ಯಮಂತ್ರಿ ಅವರ ಪ್ರವಾಸಕ್ಕಾಗಿ ವಿಮಾನಯಾನ ಸಂಸ್ಥೆಯು ಬದಲಿ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಿದೆ. ಅವರು ತಮ್ಮ ಪೂರ್ವನಿರ್ಧಾರಿತ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಆಪ್ತ ವಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT