ಶಿಮ್ಲಾ: ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶ ಮತ್ತು ಗೋವಾ ಪರಸ್ಪರ ಸಹಕಾರಿಸಲಿವೆ ಎಂದು ಸೋಮವಾರ ಅಧಿಕೃತ ಪ್ರಕಟಣೆ ತಿಳಿಸಿದೆ.

ವಿದೇಶಿ ಮತ್ತು ಸ್ವದೇಶಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಉಭಯ ರಾಜ್ಯಗಳು ವಿಶೇಷ ಪ್ಯಾಕೇಜ್ಗಳನ್ನು ರೂಪಿಸಲಿವೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ಗೋವಾ ಸಿಎಂ ಪ್ರಮೋದ್ ಸಾವಂತ್ ನಡುವೆ ನಡೆದ ಸಭೆಯಲ್ಲಿ ಈ ಪ್ರಸ್ತಾಪವನ್ನು ಚರ್ಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಭಾರತದ ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಗೋವಾ ಮುಂಚುಣಿಯಲ್ಲಿವೆ. ಒಂದು ಅನನ್ಯ ತಾಣವಾಗುವ ಸಾಮರ್ಥ್ಯವನ್ನು ಎರಡೂ ರಾಜ್ಯಗಳು ಹೊಂದಿವೆ. ಇದರ ಮೂಲಕ ಆರ್ಥಿಕತೆ ಉತ್ತೇಜಿಸುವುದರೊಂದಿಗೆ ಉದ್ಯೋಗಾವಕಾಶವನ್ನು ಒದಗಿಸಲಿವೆ ಎಂದು ಸುಖು ಹೇಳಿದ್ದಾರೆ.

ಪ್ರವಾಸೋದ್ಯಮ ಮತ್ತು ವಿವಿಧ ಉದ್ಯಮಗಳ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲು ಎರಡೂ ರಾಜ್ಯಗಳು ಕೆಲಸ ಮಾಡುತ್ತವೆ ಎಂದು ಅವರು ತಿಳಿಸಿದ್ದಾರೆ.

ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಎರಡೂ ರಾಜ್ಯಗಳ ವಿದ್ಯಾರ್ಥಿಗಳ ನಡುವೆ ಸಾಗರ-ಪರ್ವತ ವಿಷಯದ ವಿಜ್ಞಾನ ಕಾರ್ಯಾಗಾರಗಳು ಮತ್ತು ಮಾಹಿತಿ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.

ಇವನ್ನೂ ಓದಿ: ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ಕಠಿಣ ಕಾನೂನು ತನ್ನಿ: ಶಶಿ ತರೂರ್ ಆಗ್ರಹ

ಮೇಜಿನ ಮೇಲಿದ್ದ ಬಾಟಲಿ ನೀರು ಕುಡಿದ ದಲಿತ ವಿದ್ಯಾರ್ಥಿ ಮೇಲೆ ಪ್ರಾಂಶುಪಾಲರ ಹಲ್ಲೆ

ಜಾತ್ರೆಯಲ್ಲಿ ಬಲೂನ್ಗೆ ಗಾಳಿ ತುಂಬುತ್ತಿದ್ದಾಗ ಸಿಲಿಂಡರ್ ಸ್ಫೋಟ: 4 ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.