ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಪರಿಹಾರ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಇದೇ ರೀತಿ ಮುಂದುವರಿದರೆ 20 ವರ್ಷವಾದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಂಸದೆ ಕಂಗನಾ ರನೌತ್ ಭಾನುವಾರ ತಿಳಿಸಿದ್ದಾರೆ.

ಪ್ರವಾಹ ಪೀಡಿತ ಮಂಡಿ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಕಂಗನಾ, ಜಿಲ್ಲೆಯ ಜನರ ದುಃಸ್ಥಿತಿ ನೋಡಿದರೆ ದುಃಖವಾಗುತ್ತದೆ. ಸಂಬಂಧಿಕರನ್ನು ಕಳೆದುಕೊಂಡ ಕುಟುಂಬದವರಿಗೆ ಸಾಂತ್ವನ ಹೇಳಬಹುದು. ಆದರೆ ಇದೀಗ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ನೀಡಬೇಕು ಎಂದು ಹೇಳಿದ್ದಾರೆ.
.ಹಿಂದಿ ಭಾಷಿಗರ ಮೇಲಿನ ಹಲ್ಲೆ: ಪಹಲ್ಗಾಮ್ ದಾಳಿಗೆ ಸಮ; ಮಹಾರಾಷ್ಟ್ರ ಸಚಿವ ಆಶಿಶ್ .ಮಗುವಿನ ಹೊಟ್ಟೆ ಉಬ್ಬರ ಸಮಸ್ಯೆಗೆ ಕಾದ ಕಬ್ಬಿಣದ ಸರಳಿಂದ ಬರೆ ಹಾಕಿದ ಮಹಿಳೆ ವಶಕ್ಕೆ.
'ಪರಿಹಾರ ಕಾರ್ಯಗಳನ್ನು ರಾಜ್ಯ ಸರ್ಕಾರವೇ ಮಾಡಬೇಕು. ಒಬ್ಬ ಸಂಸದಳಾಗಿ, ನಾನು ಪ್ರಧಾನಿ ಮತ್ತು ಗೃಹ ಸಚಿವರಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಬಹುದು. ಸಹಾಯವನ್ನು ಪಡೆಯಬಹುದು' ಎಂದು ಕಂಗನಾ ತಿಳಿಸಿದ್ದಾರೆ.

'ನಾವು ಸಂಸದರಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಕೊಂಡಿಯಾಗಿದ್ದೇವೆ. ಕೇಂದ್ರದಿಂದ ರಾಜ್ಯಕ್ಕೆ ಯೋಜನೆಗಳನ್ನು ತಲುಪಿಸುವಲ್ಲಿ ಮತ್ತು ನಮ್ಮ ಕ್ಷೇತ್ರಗಳ ಸಮಸ್ಯೆಗಳು ಮತ್ತು ಕುಂದು ಕೊರತೆಗಳನ್ನು ಕೇಂದ್ರಕ್ಕೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ' ಎಂದು ಕಂಗನಾ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತದಿಂದ 14 ಮಂದಿ ಮೃತಪಟ್ಟಿದ್ದರೆ, 31 ಮಂದಿ ಕಾಣೆಯಾಗಿದ್ದಾರೆ.
.ಅಧಿಕೃತ ನಿವಾಸದಿಂದ ಮಾಜಿ ಸಿಜೆಐ ಚಂದ್ರಚೂಡ್ ತೆರವಿಗೆ SC ಆಡಳಿತ ಮಂಡಳಿ ಪತ್ರ.'ಕೊಡವ ಸಮಾಜದ ಮೊದಲ ನಟಿ ನಾನೇ' ಎಂದು ಹೇಳಿಕೊಂಡ ರಶ್ಮಿಕಾ ಮಂದಣ್ಣ.ತೆಲಂಗಾಣ ಔಷಧ ಕಾರ್ಖಾನೆ ಸ್ಫೋಟ: ಮತ್ತೊಬ್ಬ ಸಾವು, ಮೃತರ ಸಂಖ್ಯೆ 41ಕ್ಕೇರಿಕೆ.PSI ಎಂದು ಬರೋಬ್ಬರಿ 2 ವರ್ಷ ವಂಚಿಸಿದ್ದ ರಾಜಸ್ಥಾನದ ಮೋನಾ ಅಲಿಯಾಸ್ ‘ಮೂಲಿ’ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.