ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಸ್ಲಿಮರಿಗೆ ಬಲವಂತವಾಗಿ ಬಣ್ಣ: ಓರ್ವ ಸೆರೆ, 3 ಅಪ್ರಾಪ್ತರು ವಶಕ್ಕೆ

ಜಾಲತಾಣದಲ್ಲಿ ಹರಿದಾಡಿದ ಉತ್ತರ ಪ್ರದೇಶದ ಘಟನೆಯ ವಿಡಿಯೊ
Published : 24 ಮಾರ್ಚ್ 2024, 14:36 IST
Last Updated : 24 ಮಾರ್ಚ್ 2024, 14:36 IST
ಫಾಲೋ ಮಾಡಿ
Comments

ಲಖನೌ: ಹೋಳಿ ಆಚರಣೆ ವೇಳೆ ಮುಸ್ಲಿಂ ಸಮುದಾಯದ ಮೂವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ ಧಾಂಪುರದಲ್ಲಿ ಅಪ್ರಾಪ್ತ ವಯಸ್ಸಿನ ಮೂವರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. 

ಒಬ್ಬ ಪುರುಷ ಹಾಗೂ ಇಬ್ಬರು ಮಹಿಳೆಯರು ಬೈಕ್‌ವೊಂದರಲ್ಲಿ ಹೋಗುತ್ತಿದ್ದರು. ಆಗ ಹೋಳಿ ಆಚರಿಸುತ್ತಿದ್ದವರು ಬಲವಂತವಾಗಿ ಮೂವರಿಗೂ ಬಣ್ಣ ಎರಚಿರುವುದು, ಅವರ ಮೇಲೆ ಬಣ್ಣದ ನೀರು ಸುರಿದಿರುವ ವಿಡಿಯೊ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. 

ಮಹಿಳೆಯು ವಿರೋಧ ವ್ಯಕ್ತಪಡಿಸಿ ಬಣ್ಣ, ನೀರು ಹಾಕದಂತೆ ಹೇಳಿದರೂ ಯುವಕರು ಕೇಳುವುದಿಲ್ಲ. ಒಬ್ಬ ಯುವಕ ದಾರಿಹೋಕರಿಗೂ ಬಣ್ಣ ಎರಚುವುದು ಸಂಪ್ರದಾಯ ಎಂದಿದ್ದಾನೆ. ಕೆಲವರು ಧಾರ್ಮಿಕ ಘೋಷಣೆಗಳನ್ನೂ ಕೂಗಿದ್ದಾರೆ. ಈ ವಿಡಿಯೊ ಜಾಲತಾಣಗಳಲ್ಲಿ ಹಾರಿದಾಡಿದ ಬಳಿಕ ಪೊಲೀಸರು ಕಿರುಕುಳ ನೀಡಿದವರನ್ನು ವಶಕ್ಕೆ ಪಡೆದಿದ್ದಾರೆ. 

ಈ ಘಟನೆಗೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಹೋಳಿ ಆಚರಣೆ ನೆಪದಲ್ಲಿ ಇತರರಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT