ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮಹಿಳೆಯರಿಗೆ ಉನ್ನತ ಉದ್ಯೋಗ
Published 29 ಸೆಪ್ಟೆಂಬರ್ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಉದಾಸೀನತೆ ತೋರಿಬಂದರೂ ಶ್ರದ್ಧೆ ಮತ್ತು ಬುದ್ಧಿ ಬಲದಿಂದ ಪ್ರಯತ್ನಕ್ಕೆ ಯಾವುದೇ ರೀತಿ ಚ್ಯುತಿ ಬರುವುದಿಲ್ಲ. ವ್ಯವಹಾರದಲ್ಲಿ ಸಮಂಜಸ ನಿರ್ಧಾರ ಕೈಗೊಳ್ಳುವುದರ ಬಗ್ಗೆ ಗಮನಕೊಡಿ.
ವೃಷಭ
ಅಕ್ಕ-ಪಕ್ಕದವರ ಹಾವಭಾವಗಳಿಂದ ಬೇಸರಗೊಂಡು ಜೀವನದ ಪಾಠವನ್ನು ಕಲಿಯುವುದು ಅಗತ್ಯವೆನಿಸುವುದು. ಬಹಳ ದಿನದ ನಂತರದಲ್ಲಿ ಗುರು ಹಿರಿಯರ ದರ್ಶನ ಭಾಗ್ಯ ದೊರಕುತ್ತದೆ. ಸುಖ ಭೋಜನ ಇರುವುದು.
ಮಿಥುನ
ಮಹಿಳೆಯರಿಗೆ ಉನ್ನತ ಉದ್ಯೋಗ ಹಾಗೂ ಪ್ರಾಪ್ತವಯಸ್ಕರಿಗೆ ವಿವಾಹದ ಶುಭ ಫಲಗಳು ದೊರೆಯಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಕತ್ತಲೆಯ ಪ್ರಪಂಚದಲ್ಲಿರುವ ಜೀವನಕ್ಕೆ ದೂರದಲ್ಲೊಂದು ಸುಜ್ಯೋತಿ ಕಾಣಲಿದೆ.
ಕರ್ಕಾಟಕ
ವೃತ್ತಿಯಲ್ಲಿ ತಾತ್ಕಾಲಿಕ ಸಮಾಧಾನ ಹೊಂದಿರುವವರು ಕೆಲವು ಬದಲಾವಣೆ ಮಾಡಿಕೊಂಡರೆ ಸಮಾಧಾನ ಸಿಗುವಂತಾಗಲಿದೆ. ವಿವಾಹದ ವಿಚಾರದ ಕಾರ್ಯಗಳಲ್ಲಿನ ವಿಫಲತೆಯಿಂದ ಮನಸ್ಸಿಗೆ ಬೇಸರವಾಗಬಹುದು.
ಸಿಂಹ
ರಕ್ತ ಸಂಬಂಧಿ ಕಾಯಿಲೆಯನ್ನು ಹೊಂದಿದವರು ಅಥವಾ ಅಂಥ ಅನುಮಾನ ಇರುವವರು ಇಂದು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಈ ದಿನ ಎದುರಾಳಿಗಳೊಂದಿಗೆ ಸಂಧಾನ ಮಾಡಿಕೊಳ್ಳುವುದು ಸರಿಯಲ್ಲ.
ಕನ್ಯಾ
ಸ್ನೇಹಿತರಲ್ಲಿ ಮುಕ್ತವಾಗಿ ಮಾತನಾಡುವುದರಿಂದ ಮಾನಸಿಕ ಸಮಾಧಾನ ದೊರೆತು ಹಂತ ಹಂತವಾಗಿ ಅನುಕೂಲಕರ ವಾತಾವರಣದ ಅನುಭವ ದೊರಕಲಿದೆ. ಶುಭ ಸಮಾರಂಭಕ್ಕಾಗಿ ವಸ್ತ್ರಾಭರಣ ಖರೀದಿ ಯೋಗ.
ತುಲಾ
ಬಹಳ ದಿನದಿಂದ ಇದ್ದಂತಹ ಶತ್ರು ಬಾಧೆ ದೇವತಾನುಗ್ರದಿಂದ ನಿವಾರಣೆ ಆಗಲಿದೆ. ಸರಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಾಲೆಡಗುವ ಪರಿಸ್ಥಿತಿ ನಿಮ್ಮದಾಗಲಿದೆ. ಮಕ್ಕಳಿಗೆ ಶ್ರಮ ವಹಿಸಿ ವಿದ್ಯಾಭ್ಯಾಸ ಮಾಡಲು ತಿಳಿಸಿ.
ವೃಶ್ಚಿಕ
ಸಗಟು ವ್ಯಾಪಾರಿಗಳಿಗೆ ಅಧಿಕ ಲಾಭ. ವ್ಯವಹಾರಕ್ಕೆ ಸಹಾಯವಾಗುವಂತಹ ವಾಹನ ಖರೀದಿಯ ಬಗ್ಗೆ ಗಮನಹರಿಸಿ. ವೈದ್ಯರು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಒಳ್ಳೆಯದು.
ಧನು
ಅಭಿವೃದ್ಧಿಯ ವಿಚಾರದಲ್ಲಿ ವದಂತಿಗಳಿಗೆ ಕಿವಿಗೊಡದೆ ಪ್ರಯತ್ನ ಮುಂದುವರಿಸಿ. ಪೊಲೀಸ್ ಹುದ್ದೆಯಲ್ಲಿರುವವರಿಗೆ ಮಹತ್ವದ ಕಾರ್ಯಾ ಚರಣೆಗೆ ದೂರ ಸಂಚಾರ ಕಂಡುಬರಲಿದೆ. ಶೀತ ಬಾಧೆ ಉಂಟಾಗುವುದು.
ಮಕರ
ಎಲ್ಲಾ ಕಾರ್ಯದಲ್ಲೂ ಆತ್ಮ ವಿಶ್ವಾಸವಿರಲಿ . ಅತಿಯಾದ ಆತ್ಮ ವಿಶ್ವಾಸ ನಿಮ್ಮ ಜಯಕ್ಕೆ ಹೊಡೆತವನ್ನು ನೀಡುವುದು. ದುರ್ಗಾಪರಮೇಶ್ವರಿಯನ್ನು ಆರಾಧಿಸಿ ಶುಭ ಫಲ ಪಡೆಯುವಿರಿ. ಆಸ್ತಿ ಲಭ್ಯವಾಗಲಿದೆ.
ಕುಂಭ
ಪತ್ರಿಕೋದ್ಯಮಿಗಳಿಗೆ ಈ ದಿನದಲ್ಲಿ ಬಿಡುವಿಲ್ಲದ ಕೆಲಸಗಳು ಮತ್ತು ವಿಮರ್ಶಿಸಲು ಕಷ್ಟವಾಗುವಂಥ ಪರಿಸ್ಥಿತಿಗಳು ಎದುರಾಗುತ್ತವೆ. ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇದು ಸೂಕ್ತಕಾಲ. ಲಾಭ ಗಳಿಸುವಿರಿ.
ಮೀನ
ಮನೋಬಲದಿಂದ ಸಮಸ್ಯೆ ಬಗೆಹರಿಸಿಕೊಳ್ಳುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕಾರ್ಮಿಕರ ಬೇಡಿಕೆಗಳನ್ನು ಪೂರೈಸುವ ಭರವಸೆ ಮರೆಯದಿರಿ. ಧಾನ್ಯ ವರ್ತಕರಿಗೆ ನಿರೀಕ್ಷಿತ ಲಾಭ ಸಂಪಾದನೆ ಆಗುವುದು.