ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಮನೆ ಕುಸಿತ- ಎರಡು ಶವ ಪತ್ತೆ

Published 10 ಆಗಸ್ಟ್ 2023, 16:05 IST
Last Updated 10 ಆಗಸ್ಟ್ 2023, 16:05 IST
ಅಕ್ಷರ ಗಾತ್ರ

ನಾಹನ್‌: ‘ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿ, ಸಿರ್ಮೌರ್ ಜಿಲ್ಲೆಯ ಹಳ್ಳಿಯೊಂದಕ್ಕೆ ನೀರು ನುಗ್ಗಿದೆ. ಅದರ ಪರಿಣಮವಾಗಿ ಕುಸಿದುಬಿದ್ದ ಮನೆಯೊಂದರ ಅವಶೇಷಗಳಡಿಯಲ್ಲಿ ಸಿಲುಕಿದ್ದ ಕುಟುಂಬದ ಐದು ಮಂದಿ ಪೈಕಿ ಇಬ್ಬರ ಮೃತದೇಹಗಳನ್ನು ರಕ್ಷಣಾ ತಂಡಗಳು ಗುರುವಾರ ಪತ್ತೆ ಹಚ್ಚಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೃತರನ್ನು ಕುಲದೀಪ್‌ ಮತ್ತು ನಿತೀಶ್‌ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿಯ ಮೇಘಸ್ಫೋಟದಿಂದಾಗಿ ಪಾವೊಂಟಾ ಸಾಹಿಬ್ ಪ್ರದೇಶದ ಮಾಳಗಿ ದಡಿಯಾತ್ ಗ್ರಾಮದ ಹಲವಾರು ಮನೆಗಳಿಗೆ ನೀರು ನುಗ್ಗಿದೆ’ ಎಂದು ಹೇಳಿದ್ದಾರೆ.

‘ಕುಟುಂಬದ ಇತರ ಮೂವರಿಗಾಗಿ ಶೋಧ ಮುಂದುವರಿದಿದೆ’ ಎಂದು ಪಾವೊಂಟಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗುಂಜಿತ್ ಸಿಂಗ್ ಚೀಮಾ ತಿಳಿಸಿದ್ದಾರೆ. ಇಲ್ಲಿಯವರೆಗೆ ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT