ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೊಬ್ಬ ನಿಷ್ಠೆಯ ಹಿಂದೂ: ಅರವಿಂದ ಕೇಜ್ರಿವಾಲ್ 

Last Updated 4 ಫೆಬ್ರುವರಿ 2020, 3:07 IST
ಅಕ್ಷರ ಗಾತ್ರ

ದೆಹಲಿ:ಶಾಹೀನ್‌ಬಾಗ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ವಿಷಯವನ್ನಿಟ್ಟುಕೊಂಡೇ ದೆಹಲಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ನನ್ನನ್ನು ಹಿಂದೂ ವಿರೋಧಿಯೆಂದು ಬಿಂಬಿಸಲು ಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಸೋಮವಾರ ನ್ಯೂಸ್ 18 ಹಿಂದಿಸುದ್ದಿವಾಹಿನಿಗೆನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಜ್ರಿವಾಲ್ ನಾನೊಬ್ಬ ನಿಷ್ಠೆಯ ಹಿಂದೂ. ಬಿಜೆಪಿ ನನ್ನನ್ನ ಹಿಂದೂ ವಿರೋಧಿ ಎಂದು ಬಿಂಬಿಸಲುಯಾಕೆ ಯತ್ನಿಸುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ. ನಾನು ನಿಷ್ಠೆಯ ಹಿಂದೂಮತ್ತು ಹನುಮಾನ್ ಭಕ್ತ ಎಂದಿದ್ದಾರೆ.

ಇನ್ನೊಂದುಸುದ್ದಿವಾಹಿನಿ ನ್ಯೂಸ್ 24ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತ್ರಮಾತನಾಡುತ್ತಿದೆ. ಯಾಕೆಂದರೆ ಅವರಿಗೆ ದೆಹಲಿ ಚುನಾವಣೆ ಬಗ್ಗೆ ಹೇಳಲು ಬೇರೆ ವಿಷಯವೇ ಇಲ್ಲ. ಹಾಗಾಗಿ ಅವರು ನನ್ನನ್ನು ಭಯೋತ್ಪಾದಕ ಎಂದು ಹೇಳುತ್ತಿದ್ದಾರೆ. ಪ್ರತಿಭಟನಕಾರರೊಂದಿಗೆ ಮಾತನಾಡಿ, ರಸ್ತೆಯಿಂದ ಅವರನ್ನು ತೆರವುಗೊಳಿಸುವುದು ಬಿಜೆಪಿ ನೇತೃತ್ವದ ಕರ್ತವ್ಯ ಎಂದು ಹೇಳಿದ್ದಾರೆ.

ಅಂದ ಹಾಗೆ ಶಾಹೀನ್‌ಬಾಗ್‌ಗೆ ನೀವು ಯಾಕೆ ಹೋಗಿಲ್ಲ? ಜೆಎನ್‌ಯು ಮತ್ತುಜಾಮಿಯಾ ಮಿಲಿಯಾದಲ್ಲಿ ದಾಳಿ ನಡೆದಾಗ ನೀವು ಯಾಕೆ ಅಲ್ಲಿಗೆ ಭೇಟಿ ನೀಡಿಲ್ಲ ಎಂದು ಕೇಳಿದಾಗ, ಕಾನೂನು ಸುವ್ಯವಸ್ಥೆ ಕೇಂದ್ರದ ಅಧೀನದಲ್ಲಿ ಬರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಲ್ಲಿಗೆ ಹೋಗಬೇಕಿತ್ತು.ನಾನು ಅಲ್ಲಿಗೆ ಹೋಗಿ ಮಾಡುವಂತದ್ದೇನೂ ಇಲ್ಲ ಎಂದು ಕೇಜ್ರಿವಾಲ್ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT