ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀನಾ ಡಾಬಿಗೆ ವಿಚ್ಛೇದನ: ಎರಡನೇ ಮದುವೆಗೆ ಸಿದ್ಧರಾದ ಐಎಎಸ್ ಅಧಿಕಾರಿ ಅಮೀರ್ ಖಾನ್

ಅಕ್ಷರ ಗಾತ್ರ

ಬೆಂಗಳೂರು: ಸೆಲೆಬ್ರಿಟಿ ಐಎಎಸ್‌ ದಂಪತಿ ಎಂದೇ ಹೆಸರು ಪಡೆದಿದ್ದ ಟೀನಾ ಡಾಬಿ ಮತ್ತು ಅಥರ್ ಅಮೀರ್ ಖಾನ್ ಅವರು ಕಳೆದ ವರ್ಷ ಪರಸ್ಪರ ಒಪ್ಪಿಗೆಯ ವಿಚ್ಛೇದನ ಪಡೆದುಕೊಂಡು ಸುದ್ದಿಯಾಗಿದ್ದರು.

ಅದಾದ ಬಳಿಕ ಟೀನಾ ಡಾಬಿ ಅವರು ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಜತೆ ಮರು ಮದುವೆಯಾಗಿದ್ದರು.

ಈ ಬಾರಿ ಅಮೀರ್ ಖಾನ್ ಅವರು ಡಾ. ಮೆಹ್ರೀನ್ ಖಾಜಿ ಜತೆ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದಾರೆ.

ಭಾವಿ ಪತ್ನಿಯ ಜತೆಗಿನ ಫೋಟೊವನ್ನು ಅಮೀರ್ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೆಹ್ರೀನ್ ಖಾಜಿ ಕೂಡ ವಿವಾಹ ನಿಶ್ಚಿತಾರ್ಥದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

2015ರ ಐಎಎಸ್‌ ಬ್ಯಾಚ್‌ನ ಟಾಪರ್‌ಗಳಾಗಿದ್ದ ಟೀನಾ ಡಾಬಿ ಮತ್ತು ಅಮೀರ್ ಖಾನ್, 2018ರಲ್ಲಿ ಪ್ರೇಮ ವಿವಾಹವಾಗಿದ್ದರು. ನಂತರ 2021ರ ಆಗಸ್ಟ್‌ನಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು.

2022ರ ಏಪ್ರಿಲ್‌ನಲ್ಲಿ ಟೀನಾ ಡಾಬಿ ಅವರು ಪ್ರದೀಪ್ ಜತೆ ಮದುವೆಯಾಗಿದ್ದಾರೆ. ಅದರ ಬೆನ್ನಲ್ಲೇ, ಅಮೀರ್ ಖಾನ್ ಮತ್ತೊಂದುಮದುವೆಗೆ ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT