‘ಪ್ರೊ.ಐ.ಎ. ಪಳನಿ ಅವರ ಮಾರ್ಗದರ್ಶನದಿಂದ ಈ ಶೂಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳಲ್ಲಿ ಟ್ರೈಬೊ–ಎಲೆಕ್ಟ್ರಿಕ್ ನ್ಯಾನೊಜನರೇಟರ್ ಅಳವಡಿಸಿದ್ದು, ಅದರಿಂದ ಪ್ರತಿ ಸಲ ಹೆಜ್ಜೆ ಇಟ್ಟಾಗಲೂ ವಿದ್ಯುತ್ ಉತ್ಪಾದನೆಯಾಗುತ್ತದೆ. ಶೂಗಳಲ್ಲಿ ಅಳವಡಿಸಿರುವ ಸಾಧನವೊಂದರಲ್ಲಿ ವಿದ್ಯುತ್ ಸಂಗ್ರಹವಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.