ನವದೆಹಲಿ: ಸೈಪ್ರಸ್ ಮೂಲದ ‘ಅಕ್ರಮ’ ಆನ್ಲೈನ್ ಬೆಟ್ಟಿಂಗ್ ವೇದಿಕೆಯಾದ ಪ್ಯಾರಿಮ್ಯಾಚ್ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಶೋಧ ನಡೆಸಿದೆ. ಅಕ್ರಮಕ್ಕೆ ಬಳಸಿಕೊಂಡಿದ್ದ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ ₹110 ಕೋಟಿಯನ್ನು ವಶಕ್ಕೆ ಪಡೆದಿದ್ದು, 1,200 ಕ್ರೆಡಿಟ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಗುರುವಾರ ತಿಳಿಸಿದೆ.

ಪ್ರಾಯೋಜಿತ ಕ್ರೀಡಾ ಪಂದ್ಯಾವಳಿ ಮತ್ತು ಜನಪ್ರಿಯ ವ್ಯಕ್ತಿಗಳೊಂದಿಗೆ ಪಾಲುದಾರಿಕೆ ರೀತಿಯ ಆಕ್ರಮಣಕಾರಿ ಮಾರ್ಕೆಂಟಿಂಗ್ ಮೂಲಕ ಪ್ಯಾರಿಮ್ಯಾಚ್ ಆ್ಯಪ್ ದೇಶದಲ್ಲಿ ಚಿರಪರಿಚಿತವಾಗಿದೆ ಎಂದು ಇ.ಡಿ ಹೇಳಿದೆ. ಹೆಚ್ಚಿನ ಆದಾಯದ ಆಮಿಷವೊಡ್ಡಿ ಹೂಡಿಕೆದಾರರನ್ನು ವಂಚಿಸಿ ಒಂದು ವರ್ಷದಲ್ಲಿ ₹3,000 ಕೋಟಿಗಳಿಗೂ ಹೆಚ್ಚು ಆದಾಯ ಗಳಿಸಿದೆ ಎಂದು ಆರೋಪಿಸಲಾಗಿದೆ.

ಪ್ಯಾರಿಮ್ಯಾಚ್ ಕಾರ್ಯಾಚರಣೆ ವಿರುದ್ದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಮ್ಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ. ಆಗಸ್ಟ್ 12ರಂದು ಮುಂಬೈ, ನೋಯ್ಡಾ, ಜೈಪುರ, ಸೂರತ್, ಮದುರೈ, ಕಾನ್ಪುರ ಮತ್ತು ಹೈದರಾಬಾದ್ನ 17 ಸ್ಥಳಗಳಲ್ಲಿ ಇ.ಡಿ ಶೋಧ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.