ನವದೆಹಲಿ:ಐಐಟಿ-ಖರಗಪುರ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್-19 ತಪಾಸಣೆಯ ಅಗ್ಗದ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಅರ್) ಅನುಮೋದನೆ ನೀಡಿದೆ. ಆರ್‌ಟಿ-ಪಿಸಿಆರ್ ತಪಾಸಣೆಯಷ್ಟೇ ನಿಖರ ಫಲಿತಾಂಶ ನೀಡುವ ಈ ಕಿಟ್ ಶೀಘ್ರವೇ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಈ ಕಿಟ್‌ಗೆ ‘ಕೋವಿರಾಪ್’ ಎಂದುಹೆಸರಿಡಲಾಗಿದೆ. ಇದರ ವೆಚ್ಚ ₹10 ಸಾವಿರವಿದೆ. ಈ ಕಿಟ್ ಅನ್ನು ಬಳಸಲು ಪ್ರಯೋಗಾಲಯದ ಅವಶ್ಯಕತೆ ಇಲ್ಲ ಮತ್ತು ಪರಿಣತ ಸಿಬ್ಬಂದಿ ಅವಶ್ಯಕತೆ ಇಲ್ಲ. ಅರ್‌ಟಿ-ಪಿಸಿಆರ್‌ನಂತೆ ಗಂಟಲದ್ರವದ ಮಾದರಿಯನ್ನು ಬಳಸಿಕೊಂಡೇ ಈ ಕಿಟ್ ತಪಾಸಣೆ ನಡೆಸುತ್ತದೆ. ಆದರೆ, ಸಣ್ಣ ಟೇಬಲ್ ಮೇಲಿ ಇರಿಸಿ ಈ ಕಿಟ್ ಅನ್ನು ಬಳಸಬಹುದು. ಒಂದು ತಾಸಿನಲ್ಲಿ ಫಲಿತಾಂಶ ಲಭ್ಯವಾಗುತ್ತದೆ. ಪ್ರತಿ ತಪಾಸಣೆಗೆ ₹500 ವೆಚ್ಚ ತಗುಲಲಿದೆ ಎಂದು ವಿಜ್ಞಾನಿಗಳ ತಂಡವು ಹೇಳಿದೆ.

ಗಂಟಲದ್ರವದಲ್ಲಿ ಅತ್ಯಂತ ಕಡಿಮೆ ಸಂಖ್ಯೆ ವೈರಾಣುಗಳು ಇದ್ದಾಗಲೂ ಈ ಕಿಟ್ ಅದನ್ನು ಗುರುತಿಸಿದೆ' ಎಂದು ವಿಜ್ಞಾನಿ ಅರಿಂಧಾಂ ಮಂಡಲ್ ಮಾಹಿತಿ ನೀಡಿದ್ದಾರೆ.

‘ನಮ್ಮ ಕಿಟ್‌ನ ವಿನ್ಯಾಸಕ್ಕಾಗಿ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ’ ಎಂದು ಐಐಟಿ-ಖರಗಪುರ ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.