ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಜನನ ಪ್ರಮಾಣ ಪತ್ರ

Published 22 ಜುಲೈ 2023, 4:33 IST
Last Updated 22 ಜುಲೈ 2023, 4:33 IST
ಅಕ್ಷರ ಗಾತ್ರ

ಜೈಪುರ (ರಾಜಸ್ಥಾನ): ಇದೇ ಮೊದಲ ಬಾರಿಗೆ, ಜೈಪುರ ಗ್ರೇಟರ್‌ ಮುನ್ಸಿಪಲ್‌ ಕಾರ್ಪೊರೇಷನ್‌ನಿಂದ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರಿಗೆ ಜನನ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‌ಆರ್ಥಿಕ ಮತ್ತು ಅಂಕಿಅಂಶ ಇಲಾಖೆಯ ನಿರ್ದೇಶಕ ಮತ್ತು ಮುಖ್ಯ ರಿಜಿಸ್ಟ್ರಾರ್‌ (ಜನನ ಮತ್ತು ಮರಣ) ಭನ್ವರ್ಲಾಲ್‌ ಭೈರ್ವಾ ಅವರು ಬುಧವಾರ ಜೈಪುರದ ನೂರ್‌ ಶೇಖಾವತ್‌ ಎಂಬುವವರಿಗೆ ರಾಜಸ್ಥಾನದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಜನನ ಪ್ರಮಾಣ ಪತ್ರವನ್ನು ನೀಡಿ‌ದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಪೊರೇಷನ್‌ ಪೋರ್ಟಲ್‌ನಲ್ಲಿ ಗಂಡು ಮತ್ತು ಹೆಣ್ಣಿನ ಜನನ ದಾಖಲೆಗಳ ಜೊತೆಗೆ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಜನ್ಮ ದಾಖಲೆಗಳು ಸಹ ಈಗ ಲಭ್ಯವಿರುತ್ತವೆ. ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಜನನ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಲಾಗುವುದು ಎಂದು ಭೈರ್ವಾ ಹೇಳಿದ್ದಾರೆ.

ನೂರ್‌ ಶೇಖಾವತ್‌ ಆಂಗ್ಲ ಮಾಧ್ಯಮ ಶಾಲೆಯಿಂದ 12ನೇ ತರಗತಿ ಉತ್ತೀರ್ಣರಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಒಂದು ಸ್ವಯಂಸೇವಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಗ್ರೇಟರ್‌ ಮುನ್ಸಿಪಾಲ್‌ ಕಾರ್ಪೊರೇಷನ್‌ನ ಈ ಉಪಕ್ರಮವು ಪುರುಷರು, ಮಹಿಳೆಯರು ಮತ್ತು ವಿಶೇಷ ಚೇತನರ ದಾಖಲೆಗಳೊಂದಿಗೆ ಲಿಂಗತ್ವ ಅಲ್ಪಸಂಖ್ಯಾತರ ದಾಖಲೆಗಳನ್ನು ನಿರ್ವಹಿಸಲು ಸರ್ಕಾರಕ್ಕೆ ಸಹಾಯಕವಾಗಿದೆ ಎಂದು ಶೇಖಾವತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT