ನವದೆಹಲಿ: ನೇಪಾಳದಲ್ಲಿ ಅಸ್ಥಿರತೆ ಸೃಷ್ಟಿಯಾಗಿರುವ ಬೆನ್ನಲ್ಲೇ, ಪರಿಸ್ಥಿತಿ ತಹಬದಿಗೆ ತರುವ ತನಕವೂ ನೆರೆ ರಾಷ್ಟ್ರಕ್ಕೆ ಭೇಟಿ ನೀಡುವುದನ್ನು ಮುಂದೂಡುವಂತೆ ನಾಗರಿಕರಿಗೆ ಸರ್ಕಾರ ಸೂಚಿಸಿದೆ.

‘ಈಗಾಗಲೇ ನೇಪಾಳದಲ್ಲಿರುವ ಭಾರತೀಯರು ಯಾವುದೇ ಕಾರಣಕ್ಕೂ ರಸ್ತೆಗಿಳಿಯಬಾರದು, ಸಂಘರ್ಷದ ಸ್ಥಳದತ್ತ ಹೋಗಬಾರದು’ ಎಂದು ಕೇಂದ್ರ ವಿದೇಶಾಂಗ ಇಲಾಖೆ (ಎಂಇಇಎ) ಬಿಡುಗಡೆಗೊಳಿಸಿರುವ ಸಲಹಾ ಪ್ರಕಟಣೆಯಲ್ಲಿ ತಿಳಿಸಿದೆ.

‘ನೇಪಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿಕೊಂಡು, ಪರಿಸ್ಥಿತಿ ತಿಳಿಯಾಗುವವರೆಗೂ ಭಾರತದ ನಾಗರಿಕರು ತಮ್ಮ ಪ್ರವಾಸವನ್ನು ಮುಂದೂಡಬೇಕು. ಈಗಾಗಲೇ ಆ ದೇಶದಲ್ಲಿದ್ದರೆ, ತಾವು ಇರುವ ಜಾಗದಲ್ಲೇ ಉಳಿಯಬೇಕು. ಯಾವುದೇ ಕಾರಣಕ್ಕೂ ಬೀದಿಗಿಳಿಯಬಾರದು’ ಎಂದು ಎಂಇಎ ಹೇಳಿದೆ.

ತುರ್ತು ಸಹಾಯವಾಣಿ ಸ್ಥಾಪನೆ: ನೇಪಾಳದಲ್ಲಿರುವ ಭಾರತೀಯರು ಯಾವುದೇ ಸಮಸ್ಯೆ ಎದುರಾದರೆ, ಕಠ್ಮಂಡುವಿನಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ನೆರವಿಗಾಗಿ +977 – 980 860 2881, +977 – 981 032 6134 ಸಂಪರ್ಕಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.