ನವದೆಹಲಿ: ‘ಭಾರತ, ಪಾಕಿಸ್ತಾನ ಸೇರಿದಂತೆ ಪರಮಾಣು ಅಸ್ತ್ರಗಳನ್ನು ಹೊಂದಿರುವ 9 ರಾಷ್ಟ್ರಗಳು 2024ರಲ್ಲಿ ಅಲ್ಪ ಪ್ರಮಾಣದಲ್ಲಿ ಪರಮಾಣು ಕಾರ್ಯಕ್ರಮಗಳ ಆಧುನೀಕರಣದಲ್ಲಿ ತೊಡಗಿದ್ದವು. ಈಗಿರುವ ಅಣ್ವಸ್ತ್ರಗಳ ಪರಿಷ್ಕರಣೆ ಮತ್ತು ಹೊಸ ಆವೃತ್ತಿಗಳನ್ನು ಸೇರ್ಪಡೆ ಮಾಡಿಕೊಂಡಿವೆ’ ಎಂದು ಜಾಗತಿಕ ಚಿಂತಕರ ಚಾವಡಿಯು ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.

‘ಭಾರತವು ಅಲ್ಪ ಪ್ರಮಾಣದಲ್ಲಿ ಅಣ್ವಸ್ತ್ರಗಳನ್ನು ವಿಸ್ತರಿಸಿದ್ದು, ಹೊಸ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ’ ಎಂದು ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಸಿಪ್ರಿ)ಯ ಪ್ರಕಟಣೆಯಲ್ಲಿ ತಿಳಿಸಿದೆ.

‘ಅಣ್ವಸ್ತ್ರಕ್ಕೆ ಬಳಸುವ ಮೂಲವಸ್ತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಪಾಕಿಸ್ತಾನ ತೊಡಗಿದ್ದು, ಮುಂದಿನ ದಶಕದಲ್ಲಿ ದೊಡ್ಡ ಪ್ರಮಾಣದಲ್ಲಿ ಅಣ್ವಸ್ತ್ರ ವಿಸ್ತರಿಸುವ ಗುರಿ ಹೊಂದಿದೆ’ ಎಂದು ತಿಳಿಸಿದೆ.

ಶಸ್ತ್ರಾಸ್ತ್ರಗಳ ಸಂಗ್ರಹ ಹಾಗೂ ನಿಶ್ಶಸ್ತ್ರೀಕರಣ ಹಾಗೂ ಅಂತರರಾಷ್ಟ್ರೀಯ ಭದ್ರತೆ ಕುರಿತಾದ 2025ರ ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಇತ್ತೀಚಿಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಸೇನಾ ಸಂಘರ್ಷವನ್ನು ವರದಿಯಲ್ಲಿ ಉಲ್ಲೇಖಿಸಿದೆ.

‘ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಹಾಗೂ ಇಸ್ರೇಲ್ ದೇಶಗಳು 2024ರಲ್ಲಿ ಅಣ್ವಸ್ತ್ರಗಳ ಆಧುನೀಕರಣದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವು’ ಎಂದು ತಿಳಿಸಿದೆ.

‘2025ರ ಜನವರಿ ತಿಂಗಳಲ್ಲಿ ಜಾಗತಿಕವಾಗಿ 12,241 ಅಣ್ವಸ್ತ್ರ ಸಿಡಿತಲೆಗಳ ಪೈಕಿ, ಬಳಕೆಗಾಗಿಯೇ ಸೇನಾ ಸಂಗ್ರಹದಲ್ಲಿ 9,614ರಷ್ಟು ಸಿಡಿತಲೆಗಳಿದ್ದವು’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.