ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಲಿಸ್ಟಿಕ್‌ ಕ್ಷಿಪಣಿ ಪ್ರಯೋಗ ಯಶಸ್ವಿ: ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ

Published : 2 ನವೆಂಬರ್ 2022, 16:08 IST
ಫಾಲೋ ಮಾಡಿ
Comments

ನವದೆಹಲಿ: ವಿವಿಧ ರೀತಿಯ ಗುರಿಗಳನ್ನು ಭೇದಿಸುವ ಸಾಮರ್ಥ್ಯದ, ದೇಶೀಯವಾಗಿ ಅಭಿವೃದ್ಧಿಪಡಿಸಲಾದ 2ನೇ ಹಂತದ ಬ್ಯಾಲಿಸ್ಟಿಕ್‌ ಮಿಸೈಲ್‌ ಡಿಫೆನ್ಸ್ (ಬಿಎಂಡಿ) ಇಂಟರ್‌ಸೆಪ್ಟರ್‌ ಎಡಿ -1 ಕ್ಷಿಪಣಿಯ ಉಡಾವಣಾ ಪರೀಕ್ಷೆಯನ್ನು ಭಾರತ ಬುಧವಾರ ಯಶಸ್ವಿಯಾಗಿ ನಡೆಸಿದ್ದು, ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಮೂಡಿಸಿದೆ.

ಒಡಿಶಾ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ರಕ್ಷಣಾ ಕಣ್ಗಾವಲಿನ ಈ ಕ್ಷಿಪಣಿಯನ್ನು ಎಲ್ಲ ರೀತಿಯ ಶಸ್ತ್ರಾಸ್ತ್ರಗಳ ವ್ಯವಸ್ಥೆಯೊಂದಿಗೆ ಪ್ರಯೋಗಿಸಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

‘ಇದೊಂದು ಅನನ್ಯ ಪ್ರಕಾರದ ಕಣ್ಗಾವಲು ಕ್ಷಿಪಣಿ. ವಿಶ್ವದ ಕೆಲವೇ ರಾಷ್ಟ್ರಗಳ ಬಳಿ ಇರುವ ಸುಧಾರಿತ ತಂತ್ರಜ್ಞಾನಗಳನ್ನು ಇದು ಒಳಗೊಂಡಿದೆ’ ಎಂದುರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬಣ್ಣಿಸಿದ್ದಾರೆ.

ಎಡಿ–1 ದೀರ್ಘ ವ್ಯಾಪ್ತಿಯ ಕಣ್ಗಾವಲು ಕ್ಷಿಪಣಿಯಾಗಿದೆ. ಇದನ್ನು ವಾಯುಮಂಡಲದೊಳಗೆ ಮತ್ತು ಅದರಾಚೆಗೆ ದಾಳಿ ಮಾಡುವ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಪ್ರತಿಬಂಧಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT