ನವದೆಹಲಿ: ಭಾರತ ಮತ್ತು ಚೀನಾದ ಗಡಿ ಭದ್ರತಾ ಪಡೆಗಳ ಸಿಬ್ಬಂದಿಯು ಕಳೆದ ಒಂದು ವರ್ಷದಲ್ಲಿ 1,100ಕ್ಕೂ ಅಧಿಕ ಸಲ ಪರಸ್ಪರ ಮಾತುಕತೆ ನಡೆಸಿದ್ದಾರೆ ಎಂದು ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಸೋಮವಾರ ಹೇಳಿದ್ದಾರೆ.

‘ಎರಡೂ ಕಡೆಯವರು ಪ್ರತಿದಿನ ಸರಾಸರಿ ಮೂರು ಸಲ ಮಾತುಕತೆ ನಡೆಸಿದ್ದಾರೆ. ತಾವು ಪಹರೆ ನಡೆಸುತ್ತಿರುವ ಪ್ರದೇಶಗಳಲ್ಲಿ ಗಡಿಗೆ ಸಂಬಂಧಿಸಿದಂತೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಮಾತುಕತೆ ನಡೆದಿದೆ. 2024ರ ಅಕ್ಟೋಬರ್ ಬಳಿಕ ಗಡಿ ಭಾಗದಲ್ಲಿನ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ’ ಎಂದಿದ್ದಾರೆ.

‘ಆರಂಭದಲ್ಲಿ ಮಾತುಕತೆಗಳು ಹಿರಿಯ ಕಮಾಂಡರ್ಗಳ ಮಟ್ಟಕ್ಕೆ ಸೀಮಿತವಾಗಿತ್ತು. ಆ ಬಳಿಕ ತಳಮಟ್ಟದಿಂದಲೇ ಸಮಸ್ಯೆಗಳನ್ನು ಪರಿಹರಿಸಲು ಬೆಟಾಲಿಯನ್ ಮತ್ತು ತುಕಡಿಗಳ ಕಮಾಂಡರ್ಗಳ ಹಂತಕ್ಕೆ ಮಾತುಕತೆಯನ್ನು ವಿಸ್ತರಿಸಲಾಯಿತು’ ಎಂದು ತಿಳಿಸಿದ್ದಾರೆ.

‘ಕಳೆದ ಅಕ್ಟೋಬರ್ನಲ್ಲಿ ಉಭಯ ರಾಷ್ಟ್ರಗಳ ನಾಯಕರ ನಡುವಿನ ಸಂವಾದದ ನಂತರ ನಮ್ಮ ಸಂಬಂಧದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ರಾಜಕೀಯವಾಗಿ ನೀಡುವ ನಿರ್ದೇಶನಗಳು ಸ್ಪಷ್ಟವಾಗಿದ್ದರೆ, ಅದು ಎಲ್ಲರಿಗೂ ಪ್ರಯೋಜನ ನೀಡುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.