ನವದೆಹಲಿ: ಭಾರತ ಮತ್ತು ಚೀನಾ ನಡುವೆ ಈ ತಿಂಗಳ ಕೊನೆಯಲ್ಲಿ ನೇರ ವಿಮಾನ ಸೇವೆಗಳು ಪುನರಾರಂಭವಾಗಲಿವೆ ಎಂದು ವಿದೇಶಾಂಗ ಸಚಿವಾಲಯ(ಎಂಇಎ) ಗುರುವಾರ ತಿಳಿಸಿದೆ.

2020ರಲ್ಲಿ ಕೋವಿಡ್-19 ಸಾಂಕ್ರಾಮಿಕದ ನಂತರ ಎರಡೂ ಕಡೆಯಿಂದ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಪೂರ್ವ ಲಡಾಖ್ ಗಡಿ ವಿವಾದ ತಲೆದೋರಿದ್ದರಿಂದ ವಿಮಾನ ಸಂಚಾರ ಪುನರಾರಂಭಿಸಿರಲಿಲ್ಲ.

ಭಾರತ ಮತ್ತು ಚೀನಾದಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಸಂಪರ್ಕಿಸುವ ನೇರ ವಿಮಾನ ಸೇವೆಗಳು ಅಕ್ಟೋಬರ್ ಅಂತ್ಯದ ವೇಳೆಗೆ ಪುನರಾರಂಭಿಸಲು ಈಗ ಒಪ್ಪಿಗೆ ಸೂಚಿಸಲಾಗಿದೆ. ಈ ಸೇವೆಗಳು ಎರಡೂ ದೇಶಗಳಿಂದ ಗೊತ್ತುಪಡಿಸಿದ ಎಲ್ಲಾ ಕಾರ್ಯಾಚರಣೆಯ ಮಾನದಂಡಗಳಿಗೆ ಒಳಪಟ್ಟಿರುತ್ತವೆ ಎಂದು ಎಂಇಎ ತಿಳಿಸಿದೆ.

ಈ ವರ್ಷದ ಆರಂಭದಿಂದ, ಎರಡೂ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳು ನೇರ ವಿಮಾನ ಸೇವೆಗಳನ್ನು ಪುನರಾರಂಭಿಸುವ ಬಗ್ಗೆ ಮತ್ತು ಪರಿಷ್ಕೃತ ವೈಮಾನಿಕ ಸೇವೆಗಳ ಒಪ್ಪಂದದ ಕುರಿತು ತಾಂತ್ರಿಕ ಮಟ್ಟದ ಚರ್ಚೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.