ಆಳ ಸಮುದ್ರಯಾನಕ್ಕೆಂದು ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಈ ನೌಕೆಯು ಪ್ರತಿ ನಿಮಿಷಕ್ಕೆ 30 ಮೀಟರ್ ಆಳದವರೆಗೆ ಸಂಚರಿಸಲಿದೆ. ಸಮುದ್ರದ ಆಳದಲ್ಲಿರುವ ಕತ್ತಲೆ ಭಾಗದಲ್ಲೂ ಅನ್ವೇಷಣೆಗೆ ಅನುವಾಗುವಂತೆ ದೀಪಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಜತೆಗೆ ಸಮುದ್ರದಲ್ಲಿ ಲಭ್ಯವಾಗುವ ಖನಿಜ ಸೇರಿದಂತೆ ಇತರೆ ವಸ್ತುಗಳ ಮಾದರಿಯನ್ನು ಸಂಗ್ರಹಿಸಲು ನೌಕೆಯಲ್ಲಿ ರೋಬೊಟಿಕ್ ಕೈಗಳೂ ಇವೆ.