ನವದೆಹಲಿ: ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್ಗೆ ಭಾರತ ಒತ್ತಾಯಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಐಎಂಎಫ್ ಸಾಲದ ರೂಪದಲ್ಲಿ ನೀಡುವ ನೆರವನ್ನು ನೆರವನ್ನು ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರು ಇಂದು (ಶುಕ್ರವಾರ) ನಡೆಯಲಿರುವ ಮಂಡಳಿಯ ಸಭೆಯಲ್ಲಿ ದೇಶದ ನಿಲುವನ್ನು ಮಂಡಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.

ಈ ವರ್ಷ, ಹವಾಮಾನ ಬದಲಾವಣೆ ನಿಯಂತ್ರಣಕ್ಕಾಗಿ ಪಾಕಿಸ್ತಾನಕ್ಕೆ 130 ಕೋಟಿ ಡಾಲರ್ ಸಾಲವನ್ನು ನೀಡಲು ಐಎಂಎಫ್ ಮುಂದಾಗಿದ್ದು, ಈ ಬಗ್ಗೆ ಚರ್ಚಿಸಲು ಐಎಂಎಫ್ ಆಡಳಿತ ಮಂಡಳಿ ಶುಕ್ರವಾರ (ಮೇ 9) ಸಭೆ ಕರೆದಿದೆ. ಕಳೆದ ವರ್ಷ ಮಂಜೂರು ಮಾಡಿದ್ದ 700 ಕೋಟಿ ಸಾಲದಲ್ಲಿ ಇನ್ನೂ 100 ಕೋಟಿ ಡಾಲರ್ ಬರಬೇಕಿದೆ. ಭಾರತದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಸಾಲ ವಿಸ್ತರಿಸುವ ಬಗ್ಗೆ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಸಾಲ ನೀಡಲು ನಿರಾಕರಿಸಿದರೆ ಪಾಕಿಸ್ತಾನಕ್ಕೆ ಆರ್ಥಿಕವಾಗಿ ಮತ್ತಷ್ಟು ಸವಾಲುಗಳು ಎದುರಾಗಲಿವೆ ಎಂದು ವಿಶ್ಲೇಷಿಸಲಾಗಿದೆ.
.ಭಾರತದ ಮೇಲಿನ ಡ್ರೋನ್ ದಾಳಿ ಅಲ್ಲಗಳೆದ ಪಾಕ್: ಆಧಾರರಹಿತ ಆರೋಪ ಎಂದು ವಾದ.ಸಾಂಬಾ ಗಡಿಯಲ್ಲಿ ಉಗ್ರರ ಪ್ರಮುಖ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF.India-Pakistan Tensions: ಗಡಿಯಲ್ಲಿ ಸೇನಾ ಸಂಘರ್ಷ ತೀವ್ರ.India-Pak Tension: ಗಡಿ ಜಿಲ್ಲೆಯ ಅಧಿಕಾರಿಗಳೊಂದಿಗೆ CM ಒಮರ್ ಅಬ್ದುಲ್ಲಾ ಸಭೆ.India-Pakistan tensions: ಅಮೆರಿಕ ಮಧ್ಯಸ್ಥಿಕೆ ನಯವಾಗಿ ತಿರಸ್ಕರಿಸಿದ ಭಾರತ.India Pakistan Tensions: ಪಾಕ್ನ ಎಫ್–16 ಹೊಡೆದುರುಳಿಸಿದ IAF.India-Pakistan Tensions: 2ನೇ ದಿನವೂ ಪಾಕ್ ಷೇರುಪೇಟೆ ಪತನ.India-Pakistan Tensions: ರೂಪಾಯಿ ಮೌಲ್ಯ 84 ಪೈಸೆ ಇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.