ಕೊಲಂಬೊ: ಕೋವಿಡ್–19ನ ಮೂರನೇ ಅಲೆ ಎದುರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಭಾರತ 150 ಟನ್‌ಗೂ ಅಧಿಕ ಆಮ್ಲಜನಕ ಕಳುಹಿಸಿದೆ.

ಶ್ರೀಲಂಕಾದಲ್ಲಿ ಕೋವಿಡ್–19ನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಸೆ. 13ರ ವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ.

‘ವಿಶಾಖಪಟ್ಟಣ ಮತ್ತು ಚೆನ್ನೈನಿಂದ ಕಳುಹಿಸಲಾಗಿರುವ 150 ಟನ್‌ಗಳಷ್ಟು ಆಮ್ಲಜನಕ ಕೊಲಂಬೊ ತಲುಪಿದೆ’ ಎಂದು ಇಲ್ಲಿನ ಭಾರತೀಯ ಹೈಕಮಿಷನ್ ಶನಿವಾರ ಟ್ವೀಟ್ ಮಾಡಿದೆ.

ಭಾರತದ ನೌಕಾಪಡೆಯ ಹಡಗು ‘ಶಕ್ತಿ’, ಆಗಸ್ಟ್‌ನಲ್ಲಿ 100 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಶ್ರೀಲಂಕಾಕ್ಕೆ ತಲುಪಿಸಿದೆ’ ಎಂದೂ ಹೈಕಮಿಷನ್ ತಿಳಿಸಿದೆ.

ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರ ಕೋರಿಕೆಯ ಮೇರೆಗೆ ಭಾರತವು ಕಳೆದ ತಿಂಗಳ ಮಧ್ಯದಿಂದ ಶ್ರೀಲಂಕಾಗೆ ತುರ್ತು ಆಮ್ಲಜನಕವನ್ನು ಪೂರೈಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.