ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಕುಸಿತದಿಂದ ತತ್ತರಗೊಂಡಿದ್ದ ಪಪುವಾ ನ್ಯೂಗಿನಿಗೆ ಭಾರತದಿಂದ ನೆರವು ರವಾನೆ

Published 13 ಜೂನ್ 2024, 7:49 IST
Last Updated 13 ಜೂನ್ 2024, 7:49 IST
ಅಕ್ಷರ ಗಾತ್ರ

ನವದೆಹಲಿ: ಭಾರಿ ಪ್ರಮಾಣದ ಭೂ ಕುಸಿತಕ್ಕೆ ಒಳಗಾಗಿದ್ದ ಪಪುವಾ ನ್ಯೂಗಿನಿಗೆ ಭಾರತದಿಂದ ನೆರವು ರವಾನಿಸಲಾಗಿದೆ. ವಿಮಾನದ ಮೂಲಕ ₹8.35 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ.

ತಾತ್ಕಾಲಿಕ ಆಶ್ರಯಕ್ಕೆ ಅಗತ್ಯವಾದ ವಸ್ತುಗಳು, ನೀರಿನ ಟ್ಯಾಂಕ್‌ಗಳು, ನೈರ್ಮಲ್ಯ ಕಿಟ್‌ಗಳು ಮತ್ತು ತಿನ್ನಲು ಸಿದ್ಧವಾಗಿರುವ ಊಟ ಸೇರಿದಂತೆ 13 ಟನ್‌ಗಳಷ್ಟು ವಿಪತ್ತು ಪರಿಹಾರ ಸಾಮಗ್ರಿ ಒಳಗೊಂಡಂತೆ ಸರಿಸುಮಾರು 19 ಟನ್‌ಗಳಷ್ಟು ಸಾಮಗ್ರಿಗಳನ್ನು ಕಳುಹಿಸಲಾಗಿದೆ.

ಇದರೊಂದಿಗೆ 6 ಟನ್‌ಗಳಷ್ಟು ತುರ್ತು ಬಳಕೆಯ ಔಷಧ, ಡೆಂಗ್ಯೂ ಮತ್ತು ಮಲೇರಿಯಾ ರೋಗನಿರ್ಣಯದ ಕಿಟ್‌ಗಳು ಸೇರಿದಂತೆ ವೈದ್ಯಕೀಯ ಉಪಕರಣಗಳು ಮತ್ತು ಮಗುವಿಗೆ ನೀಡುವ ಆಹಾರ ಪೂರೈಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಳೆದ ಮಾರ್ಚ್‌ನಲ್ಲಿ ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ ಸಂಭವಿಸಿ 2 ಸಾವಿರಕ್ಕೂ ಅಧಿಕ ಜನರು ಭೂ ಸಮಾಧಿಯಾಗಿದ್ದರು. ರಾಷ್ಟ್ರವು ಅಪಾರ ಪ್ರಮಾಣದ ಆರ್ಥಿಕ ನಷ್ಟಕ್ಕೆ ಒಳಗಾಗಿತ್ತು. ಹೀಗಾಗಿ ವಿಶ್ವಸಂಸ್ಥೆಯ ಮೂಲಕ ಅಂತರರಾಷ್ಟ್ರೀಯ ನೆರವನ್ನು ಪಪುವಾ ಸರ್ಕಾರ ಕೋರಿತ್ತು. ಅದರ ಭಾಗವಾಗಿ ಭಾರತ ವಿಪತ್ತು ನೆರವನ್ನು ರವಾನಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT