ನವದೆಹಲಿ: ಅಲ್ಪಾವಧಿಗೆ ಭಾರತಕ್ಕೆ ಭೇಟಿ ನೀಡುವ ಚೀನಾ ವೃತ್ತಿಪರರಿಗೆ ಕ್ಷಿಪ್ರವಾಗಿ ಬ್ಯುಸಿನೆಸ್ ವೀಸಾ ನೀಡುವ ಉದ್ದೇಶದಿಂದ ಭಾರತ ನಿಯಮಾವಳಿಗಳಲ್ಲಿ ಬದಲಾವಣೆ ತಂದಿದೆ.

ಪೂರ್ವ ಲಡಾಖ್ ಸಂಘರ್ಷದ ಬಳಿಕ ಭಾರತ–ಚೀನಾ ಸಂಬಂಧ ಹದಗೆಟ್ಟಿತ್ತು. ಸದ್ಯ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಎರಡೂ ಕಡೆಯಿಂದ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ಭಾರತ ಈ ನಿರ್ಧಾರ ಕೈಗೊಂಡಿದೆ.

‘ಈಗಾಗಲೇ ಅರ್ಜಿ ಸಲ್ಲಿಸಿರುವ ಚೀನಾ ಅರ್ಜಿದಾರರ ದಾಖಲೆ ಪರಿಶೀಲನೆಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಪಾವಧಿಗೆ ಭಾರತಕ್ಕೆ ಬರುತ್ತಿದ್ದ ಚೀನಾ ವೃತ್ತಿಪರರಿಗೆ ಮೊದಲು ಉದ್ಯೋಗ ವೀಸಾ ಅಥವಾ ಇ–ವೀಸಾ ನೀಡಲಾಗುತ್ತಿತ್ತು. ಇದಕ್ಕೆ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಸಿಂಧುತ್ವ ಇರುತ್ತಿತ್ತು. ಸದ್ಯ ಇವರಿಗೆ ಅಲ್ಪಾವಧಿಗೆ ಬ್ಯುಸಿನೆಸ್ ವೀಸಾ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಬ್ಯುಸಿನೆಸ್ ವೀಸಾಗೆ ಅರ್ಜಿ ಸಲ್ಲಿಸಿದ ಮೂರರಿಂದ ನಾಲ್ಕು ವಾರದ ಒಳಗಾಗಿ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ಎಲ್ಲಾ ದೇಶಗಳ ವೀಸಾ ಅರ್ಜಿದಾರರಿಗೆ ನೂತನ ಬದಲಾವಣೆಗಳು ಅನ್ವಯವಾಗಲಿವೆ. ಆದರೆ ಈ ಬದಲಾವಣೆಯಿಂದ ಚೀನಾ ಪ್ರಜೆಗಳು ಹೆಚ್ಚು ಅನುಕೂಲ ಪಡೆಯಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.