ನವದೆಹಲಿ: ಭಾರತವು ಬ್ರಿಟನ್ ಜೊತೆ ಮುಕ್ತ ವ್ಯಾಪರ ಒಪ್ಪಂದ ಮಾಡಿಕೊಳ್ಳುವುದರಿಂದ ಭಾರತದ ದೇಶೀಯ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.

ಬ್ರಿಟನ್ ಭೇಟಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್ಟಿಎ) ಸಹಿ ಹಾಕುವ ಸಾಧ್ಯತೆಯಿದೆ. ಇದು ವಾಸ್ತವವಾಗಿ ಹಲವು ಪಾಲುದಾರರಿಗೆ ಹಾನಿಕಾರವಾಗಿ ಪರಿಣಮಿಸುತ್ತದೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದ ಜನರು ಉದ್ಯೋಗ ಕಂಡುಕೊಂಡಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಎಫ್ಟಿಎ ದುಷ್ಪರಿಣಾಮ ಬೀರಲಿದೆ. ಮೋದಿ ಸರ್ಕಾರವು 11 ವರ್ಷಗಳಿಂದ ಅನುಸರಿಸುತ್ತಿರುವ ನೀತಿಯು ಕೆಲವೇ ಉದ್ಯಮ ಗುಂಪಿಗೆ ನೆರವಾಗುತ್ತಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು ನಿರ್ಲಕ್ಷಿಸಿದೆ. ಇದರ ಪರಿಣಾಮ ಅವು ನಾಶವಾಗುತ್ತಿವೆ. ಅದರ ಜತೆಗೆ ಇದೀಗ ಬರಲಿರುವ ಎಫ್ಟಿಎಯಿಂದ ಈ ಉದ್ಯಮಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತವೆ ಎಂದು ಅವರು ಹೇಳಿದ್ದಾರೆ.

ದೇಶದ ಔಷಧ ಮತ್ತು ಆಟೊಮೊಬೈಲ್ ಉದ್ಯಮದ ಮೇಲೂ ಇದು ಪರಿಣಾಮ ಬೀರಲಿದೆ ಎಂದಿರುವ ಅವರು, ಇದು ಬ್ರಿಟನ್ ಉದ್ಯಮಗಳಿಗೆ ಭಾರತದ ವಿಶಾಲ ಮಾರುಕಟ್ಟೆಯನ್ನು ಮುಕ್ತಗೊಳಿಸುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.