ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಅಮೆರಿಕದ 6 ಅಣು ವಿದ್ಯುತ್‌ ಸ್ಥಾವರಗಳ ಸ್ಥಾಪನೆ: ಉಭಯ ರಾಷ್ಟ್ರಗಳ ಒಮ್ಮತ

Last Updated 14 ಮಾರ್ಚ್ 2019, 3:35 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಆರು ಅಣು ವಿದ್ಯುತ್‌ ಸ್ಥಾವರಗಳನ್ನು ನಿರ್ಮಿಸಲು ಭಾರತ ಮತ್ತು ಅಮೆರಿಕ ಸಮ್ಮತಿಸಿವೆ. ಪರಮಾಣು ಸಹಕಾರದ ಭಾಗಿವಾಗಿ ಈ ಯೋಜನೆಗೆ ಒಮ್ಮತ ಮೂಡಿದೆ.

ಅಮೆರಿಕದ ಶಸಸ್ತ್ರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಭದ್ರತೆ ವಿಭಾಗದ ಅಧೀನ ಕಾರ್ಯದರ್ಶಿ ಆ್ಯಂಡ್ರಿಯಾ ಥಾಮ್ಸನ್‌ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ನಡೆಸಿದ ಮಾತುಕತೆಯಲ್ಲಿ ಈ ಕುರಿತು ಸಮ್ಮತಿ ದೊರೆತಿದೆ. ಬುಧವಾರ ಭಾರತ ಮತ್ತು ಅಮೆರಿಕ ಜಂಟಿ ಪ್ರಕಟಣೆ ಇದನ್ನು ತಿಳಿಸಿದೆ.

’ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರ ವೃದ್ಧಿಗೆ ಉಭಯ ರಾಷ್ಟ್ರಗಳು ಬದ್ಧರಾಗಿದ್ದು, ಭಾರತದಲ್ಲಿ ಅಮೆರಿಕದ ಆರು ಅಣು ವಿದ್ಯುತ್‌ ಸ್ಥಾವರಗಳು ಸ್ಥಾಪನೆಯಾಗಲಿವೆ’ ಎಂದು ಪ್ರಕಟಣೆ ಹೇಳಿದೆ.

2008ರ ಅಕ್ಟೋಬರ್‌ನಲ್ಲಿ ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಶಕ್ತಿ ವಲಯದಲ್ಲಿ ಸಹಕಾರದ ಒಪ್ಪಂದ ಮಾಡಿಕೊಂಡಿದ್ದವು. ಭಾರತವು ಈಗಾಗಲೇ ಫ್ರಾನ್ಸ್‌, ರಷ್ಯಾ. ಕೆನಡಾ, ಅರ್ಜೆಂಟಿನಾ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್‌, ಜಪಾನ್, ವಿಯೆಟ್ನಾಂ, ಬಾಂಗ್ಲಾದೇಶ, ಕಜಖಸ್ತಾನ ಹಾಗೂ ದಕ್ಷಿಣ ಕೊರಿಯಾ ರಾಷ್ಟ್ರಗಳೊಂದಿಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದ ಮಾಡಿಕೊಂಡಿದೆ.

48 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಪರಮಾಣು ಪೂರೈಕೆದಾರರ ಒಕ್ಕೂಟ(ಎನ್‌ಎಸ್‌ಜಿ)ದಲ್ಲಿ ಭಾರತ ಸದಸ್ಯತ್ವ ಪಡೆಯಲು ಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕ ಬುಧವಾರ ಪುನರುಚ್ಚರಿಸಿದೆ. ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಚೀನಾ ಈವರೆಗೂ ಅಡ್ಡಗಾಲು ಹಾಕುತ್ತಿದೆ.

ಸಾಮೂಹಿಕ ಅಂತ್ಯಕ್ಕೆ ಕಾರಣವಾಗಬಲ್ಲ ಶಸ್ತ್ರಾಸ್ತ್ರಗಳು ಹಾಗೂ ಪೂರೈಕೆ ವ್ಯವಸ್ಥೆ ಪ್ರಸರಣ ನಿಯಂತ್ರಿಸುವುದು, ಉಗ್ರರರು ಹಾಗೂ ಭದ್ರತಾ ಪಡೆಗಳನ್ನು ಹೊರತಾಗಿ ಇತರರಿಗೆ ಅಂಥ ಶಸ್ತ್ರಾಸ್ತ್ರಗಳು ದೊರೆಯುವುದನ್ನು ತಡೆಯುವುದು ಹಾಗೂ ಜಾಗತಿಕ ಭದ್ರತೆ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT