ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ, ಭಾರತದ ನೌಕಾಪಡೆಗಳಿಂದ ಎರಡು ದಿನಗಳ ನೌಕಾಭ್ಯಾಸ

Last Updated 28 ಮಾರ್ಚ್ 2021, 12:23 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕ ಹಾಗೂ ಭಾರತದ ನೌಕಾಪಡೆಗಳು ಹಿಂದೂ ಮಹಾಸಾಗರದ ಪೂರ್ವಭಾಗದಲ್ಲಿ ಎರಡು ದಿನಗಳ ಜಂಟಿ ನೌಕಾಭ್ಯಾಸಕ್ಕೆ ಭಾನುವಾರ ಚಾಲನೆ ನೀಡಿದವು.

ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಹಕಾರಕ್ಕೆ ಈ ಜಂಟಿ ನೌಕಾಭ್ಯಾಸ ಸಾಕ್ಷಿ ಎಂದು ಭಾರತೀಯ ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಈ ನೌಕಾಭ್ಯಾಸ ಆರಂಭಗೊಂಡಿರುವುದು ಗಮನಾರ್ಹ.

ಭಾರತೀಯ ನೌಕಾಪಡೆಯ ಯುದ್ಧನೌಕೆ ‘ಶಿವಾಲಿಕ್‌’, ಸಾಗರ ಗಡಿಯಲ್ಲಿ ಕಣ್ಗಾವಲಿಡುವ ಯುದ್ಧವಿಮಾನ ‘ಪಿ8ಐ’ ಪಾಲ್ಗೊಂಡಿವೆ.

ಅಮೆರಿಕ ನೌಕಾಪಡೆಯ ‘ಯುಎಸ್‌ಎಸ್‌ ಥಿಯೋಡರ್‌ ರೂಸ್‌ವೆಲ್ಟ್‌’ ಯುದ್ಧನೌಕೆ ಈ ಜಂಟಿ ಅಭ್ಯಾಸದಲ್ಲಿ ಪಾಲ್ಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಯುಎಸ್‌ಎಸ್‌ ಥಿಯೋಡರ್‌ ರೂಸ್‌ವೆಲ್ಟ್‌’ ಒಂದು ಬೃಹತ್‌ ನೌಕೆಯಾಗಿದ್ದು, ಯುದ್ಧವಿಮಾನಗಳು, ಶತ್ರು ಪಾಳೆಯದ ಮೇಲೆ ವಿಧ್ವಂಸಕ ದಾಳಿ ನಡೆಯುವ ಶಸ್ರ್ತಾಸ್ತ್ರಗಳು, ಕಾವಲು ಹಡಗುಗಳನ್ನು ಒಳಗೊಂಡಿರುತ್ತದೆ.

‘ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಈ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಂಡಿವೆ. ಗಗನದಲ್ಲಿಯೇ ಶತ್ರು ರಾಷ್ಟ್ರಗಳ ಯುದ್ಧವಿಮಾನಗಳಿಗೆ ಪ್ರತಿರೋಧ ಒಡ್ಡುವ ಕಾರ್ಯತಂತ್ರವನ್ನು ಕರಗತ ಮಾಡಿಕೊಳ್ಳಲು ಅವಕಾಶ ದೊರೆತಿದೆ’ ಎಂದು ನೌಕಾಪಡೆಯ ವಕ್ತಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT