ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ತಿಂಗಳಲ್ಲಿ 4.36 ಲಕ್ಷ ಸೈಬರ್ ದಾಳಿ

Last Updated 11 ನವೆಂಬರ್ 2018, 14:27 IST
ಅಕ್ಷರ ಗಾತ್ರ

ನವದೆಹಲಿ:ರಷ್ಯಾ, ಅಮೆರಿಕ, ನೆದರ್ಲೆಂಡ್ಸ್ ಚೀನಾ ಹಾಗೂ ಜರ್ಮನಿಯ ಸೈಬರ್ ಅಪರಾಧಿಗಳಿಂದಭಾರತದ ಸುಮಾರು 4.36 ಲಕ್ಷ ಬಳಕೆದಾರರು ಸೈಬರ್ ದಾಳಿಗೆ ಈಡಾಗಿದ್ದಾರೆ ಎಂದು ಸೈಬರ್ ಭದ್ರತಾ ಸಂಸ್ಥೆ ಎಫ್–ಸೆಕ್ಯುರ್ ತಿಳಿಸಿದೆ. ಇಷ್ಟು ಪ್ರಕರಣಗಳು ವರದಿಯಾಗಿರುವುದು ಜನವರಿ ಮತ್ತು ಜೂನ್‌ ತಿಂಗಳ ಅವಧಿಯಲ್ಲಿ.

ಅಚ್ಚರಿಯೆಂದರೆ ಇದೇ ಅವಧಿಯಲ್ಲಿ ಭಾರತೀಯ ಸೈಬರ್ ಅಪರಾಧಿಗಳು ಆಸ್ಟ್ರಿಯಾ, ನೆದರ್ಲೆಂಡ್ಸ್, ಬ್ರಿಟನ್, ಜಪಾನ್ ಹಾಗೂ ಉಕ್ರೇನ್‌ನ 35 ಸಾವಿರ ಬಳಕೆದಾರರ ಮೇಲೆ ಸೈಬರ್ ದಾಳಿ ನಡೆಸಿದ್ದಾರೆ.

ಸೈಬರ್ ದಾಳಿಗೆ ತುತ್ತಾದ ದೇಶಗಳ ಪೈಕಿ ಬ್ರಿಟನ್ ಮೊದಲ ಸ್ಥಾನದಲ್ಲಿದ್ದರೆ ಭಾರತ 21 ಸ್ಥಾನದಲ್ಲಿದೆ. ದಾಳಿ ಎಸಗುವ ದೇಶಗಳ ಪೈಕಿ ಭಾರತ 13ನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT