ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ವರ್ಗಾವಣೆ

Last Updated 20 ಏಪ್ರಿಲ್ 2019, 13:31 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ವಾಯುಗಡಿ ದಾಟಿ ಒಳಬಂದ್ದಿದ್ದವು ಎನ್ನಲಾದ ಪಾಕಿಸ್ತಾನದ ಎಫ್‌ 16 ವಿಮಾನಗಳನ್ನು ಬೆನ್ನುಹತ್ತಿ ಹೋಗಿ, ಪಾಕಿಸ್ತಾನಕ್ಕೆ ಸೆರೆ ಸಿಕ್ಕಿದ್ದ ವ್ಹಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಭಾರತೀಯ ವಾಯು ಸೇನೆಯು ಶನಿವಾರಶ್ರೀನಗರ ವಾಯುನೆಲೆಯಿಂದ ವರ್ಗಾವಣೆ ಮಾಡಿದೆ.

ಅವರ ಭದ್ರತೆ ವಿಚಾರವಾಗಿ ವ್ಯಕ್ತವಾಗಿದ್ದ ಆತಂಕಗಳ ಹಿನ್ನೆಲೆಯಲ್ಲಿ ಅವರನ್ನು ಕಾಶ್ಮೀರ ಕಣಿವೆಯಿಂದ ವರ್ಗಾವಣೆ ಮಾಡಲಾಗಿದ್ದು,ದೇಶದ ಮತ್ತೊಂದು ಪ್ರಮುಖ ವಾಯು ನೆಲೆಯಾದ ಪಶ್ಚಿಮ ವಲಯಕ್ಕೆ ಅವರನ್ನು ನಿಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ.ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇದರ ನಡುವೆ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಅಭಿನಂದನ್‌ ಅವರು ಅತಿ ಶೀಘ್ರದಲ್ಲೇ ವಿಮಾನದ ಕಾಕ್‌ಪಿಟ್‌ ಮರಳುವ ಸಾಧ್ಯತೆಗಳಿವೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ಪತ್ರಿಕೆಯು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಬೆಂಗಳೂರಿನಲ್ಲಿರುವ ಐಎಎಮ್‌ (ಇನ್‌ಸ್ಟಿಟ್ಯೂಟ್‌ ಆಫ್‌ ಏರೋಸ್ಪೇಸ್‌ ಮೆಡಿಸಿನ್‌) ಸಂಸ್ಥೆಯಲ್ಲಿ ಕೆಲ ವಾರಗಳ ಕಾಲ ಅಭಿನಂದನ್‌ ವರ್ಧಮಾನ್‌ ಅವರು ಪರೀಕ್ಷೆಗೆ ಒಳಪಡಲಿದ್ದು, ಸಂಸ್ಥೆ ವರದಿ ನೀಡಿದ ಬಳಿಕ ಅವರನ್ನು ಕರ್ತವ್ಯಕ್ಕೆ ನಿಯೋಜಿಸುವ ಸಾಧ್ಯತೆಗಳಿವೆ ಎಂದು ಅದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT