ಬೆತಿಯಾ: 'ಬಿಹಾರದಲ್ಲಿ ಮತ ಕಳ್ಳತನದ ಮೂಲಕ ಸರ್ಕಾರ ರಚಿಸಲು ಎನ್ಡಿಎ ಹುನ್ನಾರ ನಡೆಸುತ್ತಿದೆ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಬುಧವಾರ) ಆರೋಪ ಮಾಡಿದ್ದಾರೆ.

'ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ 65 ಲಕ್ಷ ಮಂದಿಯ ಹೆಸರುಗಳನ್ನು ಅಳಿಸಲಾಗಿದೆ' ಎಂದೂ ಆರೋಪಿಸಿದ್ದಾರೆ.

ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, 'ದೇಶದ ಈಗಿನ ಪರಿಸ್ಥಿತಿ ಬ್ರಿಟಿಷ್ ಆಳ್ವಿಕೆಗೆ ಸಮಾನವಾಗಿದ್ದು, ಭವಿಷ್ಯದಲ್ಲಿ ಚುನಾವಣೆ ನಡೆಯುತ್ತದೆಯೇ ಎಂಬುದೇ ಅನುಮಾನ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ನನ್ನ ಸೋದರ ರಾಹುಲ್ ಗಾಂಧಿ ಇಂದು ಹರಿಯಾಣದಲ್ಲೂ ಮತ ಕಳ್ಳತನದ ಬಗ್ಗೆ ಹೇಳಿಕೆ ನೀಡಿದ್ದಾರೆ. ಉತ್ತರ ಭಾರತದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆದಿವೆ' ಎಂದು ರಾಹುಲ್ ಹೇಳಿಕೆಯನ್ನು ಉಲ್ಲೇಖಿಸಿ ಪ್ರಿಯಾಂಕಾ ಆರೋಪಿಸಿದ್ದಾರೆ.

'ಎನ್ಡಿಎ ಎಲ್ಲವನ್ನೂ ನಿರ್ನಾಮ ಮಾಡುತ್ತಿದೆ. ಭವಿಷ್ಯದಲ್ಲಿ ಚುನಾವಣೆ ನಡೆಯಬಹುದೇ ಎಂದು ಅನುಮಾನವಾಗಿದೆ. ನೀವು ಏಕೆ ಮೌನವಾಗಿದ್ದೀರಿ? ಅವರನ್ನು ಅಧಿಕಾರದಿಂದ ಕೆಳಗಿಳಿಸಿ' ಎಂದು ಮತದಾರರಿಗೆ ಪ್ರಿಯಾಂಕಾ ಕರೆ ನೀಡಿದ್ದಾರೆ.

'ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜನರು 25 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಲಿದ್ದಾರೆ' ಎಂದು ಅವರು ಉಲ್ಲೇಖಿಸಿದ್ದಾರೆ.

'ಬಡ ಕುಟುಂಬಕ್ಕೆ ಕನಿಷ್ಠ ಒಂದು ಉದ್ಯೋಗ ನೀಡಲು ಪ್ರಯತ್ನಿಸಲಿದ್ದೇವೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ' ಎಂದು ಭರವಸೆ ನೀಡಿದ್ದಾರೆ.
.ಹರಿಯಾಣದಲ್ಲೂ ಮತಗಳವು; ಕಾಂಗ್ರೆಸ್ ಜಯ ಕಸಿದುಕೊಂಡ ಬಿಜೆಪಿ: ರಾಹುಲ್ ಗಾಂಧಿ ಆರೋಪ.ಹರಿಯಾಣದಲ್ಲಿ ಮತ ಕಳ್ಳತನ | ರಾಹುಲ್ ಗಾಂಧಿ ಆರೋಪ ಆಧಾರರಹಿತ: ಚುನಾವಣಾ ಆಯೋಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.