ಕೊಲಂಬೊ: ಪಶ್ಚಿಮ ಕರಾವಳಿಯ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ತೊಂದರೆಗೀಡಾಗಿ ಕಾಣೆಯಾಗಿದ್ದ ನಾಲ್ವರು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿದೆ ಎಂದು ಸೋಮವಾರ ಅಧಿಕೃತ ಹೇಳಿಕೆ ತಿಳಿಸಿದೆ.

ಮುಂಬೈನ ಸಾಗರ ರಕ್ಷಣಾ ಸಮನ್ವಯ ಕೇಂದ್ರ (ಎಂಆರ್ಸಿಸಿ) ಸೂಚನೆ ನೀಡಿದ ನಂತರ ಶ್ರೀಲಂಕಾ ನೌಕಾಪಡೆಯು ನಡೆಸಿದ ಸಂಘಟಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ(ಎಸ್ಎಆರ್) ಭಾನುವಾರ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ತಿಳಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ ಜೂನ್ 29ರಂದು ಕಾಣೆಯಾಗಿದ್ದ ಭಾರತೀಯ ಮೀನುಗಾರಿಕಾ ದೋಣಿಯ ಬಗ್ಗೆ ಎಂಆರ್ಸಿಸಿ, ಶ್ರೀಲಂಕಾ ನೌಕಾಪಡೆಗೆ ಎಚ್ಚರಿಕೆ ನೀಡಿತ್ತು. ಎಲ್ಲ ಸಂವಹನ ಸಂಪರ್ಕಗಳನ್ನು ಬೋಟ್ ಕಳೆದುಕೊಂಡಿತ್ತು.

ಮೀನುಗಾರಿಕಾ ದೋಣಿ ಸಮುದ್ರದಲ್ಲಿ ತೊಂದರೆಗೆ ಒಳಗಾಗಿ ಚಿಲಾವ್ನಲ್ಲಿ ಸಿಲುಕಿದ್ದ ನಾಲ್ವರು ಭಾರತೀಯ ಮೀನುಗಾರರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

ಭಾರತದ ಮಿನಿಕೋಯ್ ದ್ವೀಪದ ಮೀನುಗಾರರನ್ನು ಡಿಕೋವಿಟಾ ಬಂದರಿಗೆ ಸುರಕ್ಷಿತವಾಗಿ ಕರೆತರಲಾಯಿತು. ಅಲ್ಲಿ ಶ್ರೀಲಂಕಾ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಅಗತ್ಯ ನೆರವನ್ನು ನೀಡಿದೆ.

ಕಳೆದ ಎರಡು ವಾರಗಳಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರನ್ನು ರಕ್ಷಿಸಿದ ಎರಡನೇ ಪ್ರಕರಣ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.