ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ಡಾ. ಗುಣವಂತರಾಯ್ ಗಣಪತ್ಲಾಲ್ ಪಾರಿಕ್ ಅವರು ಗುರುವಾರ ನಿಧನರಾಗಿದ್ದಾರೆ.

ಹಿರಿಯ ಗಾಂಧಿವಾದಿಯೂ ಆಗಿದ್ದ ಅವರು ಮಹಾತ್ಮ ಗಾಂಧಿ ಅವರ 156ನೇ ಜಯಂತಿಯಂದೇ ನಿಧನ ಹೊಂದಿದ್ದಾರೆ. ವೈದ್ಯರಾಗಿದ್ದ ಅವರು ಮುಂಬೈನ ಗ್ರ್ಯಾಂಡ್ ರಸ್ತೆಯ ನಿವಾಸದಲ್ಲಿ ಕೊನೆಯುಸಿರೆಳೆದರು.

ಗುಣವಂತರಾಯ್ ಗಣಪತ್ಲಾಲ್ ಪಾರಿಕ್ ಅವರು ಜಿಜಿ ಪಾರಿಕ್... ಜಿಜಿ ಎಂದೇ ಪ್ರಸಿದ್ಧರಾಗಿದ್ದರು. ಪಾರಿಕ್ ಅವರಿಗೆ 101 ವರ್ಷ ವಯಸ್ಸಾಗಿತ್ತು. 2023ರ ಡಿಸೆಂಬರ್ 30ರಂದು ಅವರಿಗೆ 100 ವರ್ಷ ತುಂಬಿತ್ತು. ಪಾರಿಕ್ ಮೃತದೇಹವನ್ನು ಮುಂಬೈಯಲ್ಲಿರುವ ಸರ್ಕಾರಿ ಜೆಜೆ ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿದ್ದ ಅವರು, 1975ರ ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಅವರು ಗೋವಾ ವಿಮೋಚನಾ ಚಳವಳಿ, ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಕೂಡ ಭಾಗವಹಿಸಿದ್ದರು.

1951-52ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಎಲ್ಲಾ ಚುನಾವಣೆಗಳಲ್ಲೂ ಪಾರಿಕ್ ಮತ ಚಲಾಯಿಸಿದ್ದಾರೆ.

ಪಾರಿಕ್ ಅವರು 1961ರಲ್ಲಿ ಸ್ಥಾಪನೆಯಾದ ರಾಯಗಢ ಜಿಲ್ಲೆಯ ತಾರಾದಲ್ಲಿರುವ ಯೂಸುಫ್ ಮೆಹರಲ್ಲಿ ಕೇಂದ್ರದ ಅಧ್ಯಕ್ಷರಾಗಿದ್ದರು. ಈ ಸಂಸ್ಥೆ ಆರೋಗ್ಯ, ಶಿಕ್ಷಣ, ಮಹಿಳೆಯರು ಮತ್ತು ಆದಿವಾಸಿಗಳ ಸಬಲೀಕರಣ, ಕೃಷಿ ಕೌಶಲ್ಯ ಅಭಿವೃದ್ಧಿ, ಕೃಷಿಯೇತರ ಉದ್ಯೋಗ ಸೃಷ್ಟಿ ಮತ್ತು ವಿಪತ್ತು ಪರಿಹಾರ ಪ್ರಯತ್ನಗಳನ್ನು ಒಳಗೊಂಡ ವೈವಿಧ್ಯಮಯ ಲೋಕೋಪಕಾರಿ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಕಳೆದ ಕೆಲವು ವರ್ಷಗಳಿಂದ ಗಾಲಿಕುರ್ಚಿಯಲ್ಲಿ ಓಡಾಟ ನಡೆಸುತ್ತಿದ್ದ ಪಾರಿಕ್ ಅವರು ವಾರಕ್ಕೊಮ್ಮೆ ವೈಎಂಸಿಗೆ ಭೇಟಿ ನೀಡುತ್ತಿದ್ದರು.
.ಖ್ಯಾತ ಶಾಸ್ತ್ರೀಯ ಗಾಯಕ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮಿಶ್ರಾ ನಿಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.