ನವದೆಹಲಿ: ಭಾರತದ ಐ.ಟಿ ಉದ್ಯೋಗಿಗಳಿಗೆ ನೀಡುತ್ತಿದ್ದ ಎಚ್–1ಬಿ ವೀಸಾ ಕಡಿತಕ್ಕೆ ಅಮೆರಿಕ ಮುಂದಾಗಿದೆ.

ವಿದೇಶಿ ಕಂಪನಿಗಳು ತಮ್ಮದತ್ತಾಂಶಗಳನ್ನು ಸ್ಥಳೀಯವಾಗಿ ಸಂಗ್ರಹಿಸಬೇಕು (ದತ್ತಾಂಶ ಸ್ಥಳೀಕರಣ) ಎಂಬ ಭಾರತದಕ್ರಮಕ್ಕೆಅಮೆರಿಕ ಈ ಪ್ರತಿಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಕೆಲವೇ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಅಂದು ಈ ವಿಚಾರ ಚರ್ಚೆಗೆ ಬರಬಹುದು.

‘ವರ್ಷಕ್ಕೆ 85,000 ಮಂದಿ ಅಮೆರಿಕಕ್ಕೆ ತೆರಳುತ್ತಿದ್ದರು. ಎಚ್–1ಬಿವೀಸಾ ಪಡೆಯುವರಲ್ಲಿ ಶೇ 70ರಷ್ಟು ಮಂದಿ ಭಾರತೀಯರೇ ಆಗಿದ್ದರು. ವಿತರಣೆ ಪ್ರಮಾಣವನ್ನು ಶೇ 15ಕ್ಕೆ ಇಳಿಸುವಂತೆ ಅಮೆರಿಕ ಸೂಚಿಸಿದೆ. ಇದು ಭಾರತದ ವಿರುದ್ಧ ತೆಗೆದುಕೊಂಡ ಕ್ರಮವೇ ಆಗಿದೆ’ ಎಂದು ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ದತ್ತಾಂಶ ಸ್ಥಳೀಕರಣಕ್ಕೆ ಅಮೆರಿಕದ ತೀವ್ರ ಆಕ್ಷೇಪ ಇದೆ. ಇದು ಕೇವಲ ಭಾರತದ ವಿರುದ್ಧ ಮಾತ್ರವಲ್ಲ. ಈ ಕ್ರಮಕ್ಕೆ ಮುಂದಾಗಿರುವ ಎಲ್ಲ ದೇಶಗಳಿಗೂ ನೂತನ ನೀತಿ ಅನ್ವಯಿಸಲಿದೆ ಎಂದು ಅಮೆರಿಕ ಹೇಳಿದೆ. ಆದರೆ, ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮಾತ್ರ ಈ ಸಂಬಂಧ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ತುರ್ತು ಸಭೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳ ಸಭೆ ಕರೆದುಭಾರತದ ಮೇಲಾಗುವ ಪರಿಣಾಮಗಳ ಕುರಿತು ಚರ್ಚೆ ನಡೆಸಿದೆ.

₹ 10.5 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆಸುತ್ತಿರುವ ಭಾರತೀಯ ಐ.ಟಿ ಕಂಪನಿಗಳು ಅಮೆರಿಕದ ನೂತನ ನೀತಿಯ ಪರಿಣಾಮವನ್ನು ಎದುರಿಸಬೇಕಿದೆ.

‘ಅಮೆರಿಕ, ಭಾರತವನ್ನು ಧನಾತ್ಮಕವಾಗಿ ನೋಡುತ್ತದೆ’
ವೀಸಾ ಸಂಬಂಧ ವಾಷಿಂಗ್ಟನ್ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ ಎಂದು ಹೇಳಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಧನಾತ್ಮಕವಾಗಿ ಅಮೆರಿಕ ಭಾರತದ ಕ್ರಮಗಳನ್ನು ಪರಿಗಣಿಸುತ್ತಿದೆ. ನಮ್ಮ ರಕ್ಷಣಾತ್ಮಕ ಸಂಬಂಧಗಳು ಬಲಗೊಳ್ಳುತ್ತಿವೆ. ಯಾವುದೇ ವಿರೋಧಾಭಾಸಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ.

ವೀಸಾ ಕಡಿತಗೊಳಿಸುವ ಕುರಿತು ಯಾವುದೇ ಮಾಹಿತಿ ನಮಗೆ ಲಭ್ಯವಾಗಿಲ್ಲ. ವಾಷಿಂಗ್ಟನ್‌ನಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
–ರವೀಶ್ ಕುಮಾರ್, ವಿದೇಶಾಂಗ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.