ನವದೆಹಲಿ: ದೇಶದಾದ್ಯಂತ ಬುಧವಾರ ಒಂದೇ ದಿನ 11,72,179 ಕೋವಿಡ್–19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಮೂಲಕ ಕೋವಿಡ್–19 ಪತ್ತೆಹಚ್ಚಲು ಒಟ್ಟಾರೆ 4.55 ಕೋಟಿಗೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿರುವ ಪರಿಣಾಮ ದೃಢಪಡುತ್ತಿರುವ ಪ್ರಕರಣಗಳ ಪ್ರಮಾಣವೂ ಇಳಿಕೆಯಾಗಿದೆ. ದೇಶದಲ್ಲಿ ಕಳೆದ ಜನವರಿ 30ರಂದು ನಿತ್ಯ ಕೇವಲ 10 ಪರೀಕ್ಷೆಗಳು ನಡೆಯುತ್ತಿದ್ದವು, ಈ ಪ್ರಮಾಣ ಇದೀಗ ಸರಾಸರಿ 11 ಲಕ್ಷ ದಾಟಿದೆ. ಈ ಮುಖಾಂತರ ಆರಂಭಿಕ ಹಂತದಲ್ಲೇ ಸೋಂಕಿತರನ್ನು ಪತ್ತೆ ಹಚ್ಚಿನ ಕ್ವಾರಂಟೈನ್ ಮಾಡಲು ಸಹಕಾರಿಯಾಗಿದೆ. ಇದರಿಂದ ಮರಣ ಪ್ರಮಾಣದಲ್ಲೂ ಮತ್ತಷ್ಟು ಇಳಿಕೆ ಕಂಡುಬರಲಿದೆ ಎಂದುಸಚಿವಾಲಯವು ತಿಳಿಸಿದೆ.

ಪ್ರಯೋಗಾಲಯಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿರುವುದು, ಪರೀಕ್ಷೆಗಳ ಸಂಖ್ಯೆ ಹೆಚ್ಚಳಕ್ಕೆ ಒಂದು ಕಾರಣ. ಪ್ರಸ್ತುತ 1,022 ಸರ್ಕಾರಿ ಹಾಗೂ 601 ಖಾಸಗಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ.ಭಾರತದಲ್ಲಿ ಕೋವಿಡ್–19 ಮರಣ ಪ್ರಮಾಣ ಶೇ 1.75ಕ್ಕೆ ಇಳಿಕೆಯಾಗಿದ್ದು, ಗುಣಮುಖ ಪ್ರಮಾಣ 77.09ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.