ಜೈಪುರ: ಭಾರತ ಮತ್ತು ಅಮೆರಿಕದ ಸೇನಾ ಪಡೆಗಳು ರಾಜಸ್ಥಾನದ ಮಹಾರಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನ ವಿದೇಶಿ ತರಬೇತಿ ಕೇಂದ್ರದಲ್ಲಿ ಸೋಮವಾರ ಜಂಟಿ ಸಮರಾಭ್ಯಾಸ ಆರಂಭಿಸಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
20ನೇ ಆವೃತ್ತಿಯ ಭಾರತ–ಅಮರಿಕ ಸೇನೆಯ ಜಂಟಿ ತಾಲೀಮು ಸೆಪ್ಟೆಂಬರ್ 22ರವರೆಗೆ ಮುಂದುವರಿಯಲಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಅಮಿತಾಭ್ ಶರ್ಮಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಉಭಯ ದೇಶಗಳ ಸೇನೆಗಳು 2004ರಿಂದಲೂ ಪ್ರತಿ ವರ್ಷ ಈ ತಾಲೀಮು ನಡೆಸುತ್ತವೆ.
ಭಾರತ ಮತ್ತು ಅಮೆರಿಕದ ಸೇನೆಯ ತಲಾ 600 ಯೋಧರು ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ನಡೆಸಲು ಉಭಯ ದೇಶಗಳ ಸೇನಾ ಸಾಮರ್ಥ್ಯ ವೃದ್ಧಿ ಉದ್ದೇಶದಿಂದ ಈ ಅಭ್ಯಾಸ ನಡೆಸಲಾಗುತ್ತಿದೆ.