ಬೆಂಗಳೂರು:ಗೂಗಲ್ ಮತ್ತು ಅದರ ಮಾತೃ ಕಂಪನಿ ಆಲ್ಫಾಬೆಟ್ ಸಿಇಒ ಆಗಿರುವ, ಭಾರತೀಯ ಮೂಲದ ಸುಂದರ್ ಪಿಚೈ, ಜೂನ್ 10ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪಿಚೈ ಕುರಿತ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ.

ಸುಂದರ್ ಪಿಚೈಗೆ ಕ್ರಿಕೆಟ್ ಮತ್ತು ಫುಟ್ಬಾಲ್ ಎಂದರೆ ತುಂಬಾ ಇಷ್ಟ. ಬಿಡುವಿನ ವೇಳೆಯಲ್ಲಿ ಅವರು ಆಟದಲ್ಲಿ ಪಾಲ್ಗೊಳ್ಳುತ್ತಾರೆ. ಜತೆಗೆ ಫುಟ್ಬಾಲ್ ಕುರಿತು ಆಸಕ್ತಿಯಿದ್ದು, ಬಾರ್ಸಿಲೋನಾ ಮತ್ತು ಲಯೋನೆಲ್ ಮೆಸ್ಸಿಯ ಅಭಿಮಾನಿ ಎಂದು ಹೇಳಿಕೊಳ್ಳುತ್ತಾರೆ.

ಸುಂದರ್ ಪಿಚೈ ಮದುವೆಯಾಗಿದ್ದು, ತನ್ನ ಕಾಲೇಜು ದಿನಗಳ ಗೆಳತಿ ಅಂಜಲಿಯನ್ನು. ಐಐಟಿ ಖರಗ್ಪುರದಲ್ಲಿ ಸಹಪಾಠಿಯಾಗಿದ್ದ ಅಂಜಲಿ ಮೂಲತಃ ರಾಜಸ್ಥಾನದ ಕೋಟಾದವರಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಸುಂದರ್ ಪಿಚೈ ಐಐಟಿ ಖರಗ್ಪುರದಿಂದ ಬಿ.ಟೆಕ್ ಪದವಿ ಪಡೆದಿದ್ದಾರೆ. ನಂತರ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿವಿಯಿಂದ ಎಂಎಸ್ ಮತ್ತು ಪೆನ್ಸಿಲ್ವೇನಿಯಾ ವಿವಿಯಿಂದ ಎಂಬಿಎ ಪದವಿ ಪಡೆದಿದ್ದಾರೆ.

ಕನ್ನಡ ಕೆಟ್ಟ ಭಾಷೆ ಎಂದ ವೆಬ್ಸೈಟ್: ನೆಟ್ಟಿಗರ ಹೋರಾಟಕ್ಕೆ ಮಣಿದ ಗೂಗಲ್

ಗೂಗಲ್ ಮತ್ತು ಆಲ್ಫಬೆಟ್ ಸಿಇಒ ಆಗಿ 2019ರಲ್ಲಿ ಬಡ್ತಿ ಪಡೆಯುವುದಕ್ಕೂ ಮೊದಲು ಅವರು ಮೆಕೆನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ನಂತರ 2004ರಲ್ಲಿ ಗೂಗಲ್ ಸೇರಿದ್ದರು.

ಹೊಸ ಐಟಿ ನಿಯಮಗಳು: ಮಾಹಿತಿ ಅಳವಡಿಸಿದ ಫೇಸ್‌ಬುಕ್, ಗೂಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.