ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ ನಿಧನ: ಪ್ರಧಾನಿ ಮೋದಿ ಸಂತಾಪ

Published 18 ಫೆಬ್ರುವರಿ 2024, 5:23 IST
Last Updated 18 ಫೆಬ್ರುವರಿ 2024, 5:23 IST
ಅಕ್ಷರ ಗಾತ್ರ

ನವದೆಹಲಿ: ಜೈನ ಸಮುದಾಯದ ದಾರ್ಶನಿಕ ಮುನಿ, ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ ಅವರು ಭಾನುವಾರ ಮುಂಜಾನೆ ಛತ್ತೀಸಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ನಿಧನರಾದರು. 

ವಿದ್ಯಾಸಾಗರ ಮಹಾರಾಜರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. 3 ದಿನಗಳ ಹಿಂದೆ ಸಮಾಧಿ ಪ್ರಕ್ರಿಯೆ ಅಂದರೆ ‘ಸಲ್ಲೇಖನ’ವನ್ನು ಪ್ರಾರಂಭಿಸಿದ್ದರು. ಇದರ ಅಡಿಯಲ್ಲಿ, ಅವರು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಇದಾದ ಬಳಿಕ ಶನಿವಾರ ರಾತ್ರಿ 2:35ರ ಸುಮಾರಿಗೆ ಆಚಾರ್ಯ ದೇಹ ತೊರೆದಿದ್ದಾರೆ.

ಜೈನ ಧರ್ಮದ ಪ್ರಕಾರ ಸಲ್ಲೇಖನ ಎಂದರೆ ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ತೆಗೆದುಕೊಳ್ಳುವ ಪ್ರತಿಜ್ಞೆಯಾಗಿದೆ. ಸಾವಿನ ತನಕ ಸ್ವಯಂಪ್ರೇರಿತ ಉಪವಾಸವನ್ನು ಇದು ಒಳಗೊಂಡಿರುತ್ತದೆ ಎಂದು ಜೈನ ತೀರ್ಥರರೊಬ್ಬರು ಹೇಳಿದ್ದಾರೆ.

ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು ಭಾನುವಾರ ಮಧ್ಯಾಹ್ನ 1 ಗಂಟೆಗೆ ಮೆರವಣಿಗೆ ನಡೆಸಲಾಗುವುದು, ಬಳಿಕ ಚಂದ್ರಗಿರಿ ತೀರ್ಥದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಆಶ್ರಮದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜೈನ ಮುನಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ನನ್ನ ಆಲೋಚನೆ ಮತ್ತು ಪ್ರಾರ್ಥನೆ ಆಚಾರ್ಯ ಶ್ರೀ 108 ವಿದ್ಯಾಸಾಗರ ಜೀ ಮಹಾರಾಜ ಅವರ ಅಸಂಖ್ಯಾತ ಭಕ್ತರೊಂದಿಗೆ ಇವೆ. ಸಮಾಜಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ, ವಿಶೇಷವಾಗಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ ಅವರ ಪ್ರಯತ್ನ, ಬಡತನ ನಿರ್ಮೂಲನೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಮಾಡಿದ ಕೆಲಸಗಳಿಂದಾಗಿ ಮುಂಬರುವ ಪೀಳಿಗೆಯ ಜನ ಅವರನ್ನು ನೆನಪಿಸಿಕೊಳ್ಳುತ್ತಾರೆ. ವರ್ಷಗಳ ಹಿಂದೆ ಅವರ ಆಶೀರ್ವಾದ ಪಡೆವ ಅವಕಾಶ ನನಗೆ ಸಿಕ್ಕಿತ್ತು. ಕಳೆದ ವರ್ಷದ ಕೊನೆಯಲ್ಲಿ ಛತ್ತೀಸಗಢದ ಡೊಂಗರಗಢದಲ್ಲಿರುವ ಚಂದ್ರಗಿರಿ ಜೈನ ಮಂದಿರಕ್ಕೆ ನಾನು ಭೇಟಿ ನೀಡಿದ್ದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ, ನಾನು ಅವರೊಂದಿಗೆ ಸಮಯ ಕಳೆದಿದ್ದೇನೆ ಮತ್ತು ಅವರ ಆಶೀರ್ವಾದವನ್ನೂ ಪಡೆದಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT