ಶ್ರೀನಗರ: ಭಯೋತ್ಪಾದಕರೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಸರ್ಕಾರಿ ನೌಕರರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಭಯೋತ್ಪಾದನಾ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನಿರ್ದೇಶನ ನೀಡಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳ ಮೇಲೆ ನಿಗಾ ಇಡಲಾಗಿದ್ದು, ಅವರ ಚಟುವಟಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದಕ್ಕಾಗಿಯೇ 2021ರ ಏಪ್ರಿಲ್ನಲ್ಲಿ ವಿಶೇಷ ಕಾರ್ಯಪಡೆ (ಎಸ್ಟಿಎಫ್) ರಚಿಸಲಾಗಿದೆ.
.ಸಿಎಂ ಸಿದ್ದರಾಮಯ್ಯ ಹೇಳಿದ ಬಾವಿ ನೀರಿನ ರೂಪಕ ಮತ್ತು ಸಾಮಾಜಿಕ ವ್ಯವಸ್ಥೆ.Dhurandhar | ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ.
ಸಂವಿಧಾನದ 311 (2) (ಸಿ) ವಿಧಿ ಅಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 80 ಸರ್ಕಾರಿ ನೌಕರರನ್ನು ವಜಾಗೊಳಿಸಲಾಗಿದೆ. ರಾಜ್ಯದ ಭದ್ರತೆಗೆ ಹಾನಿಯಾಗುವ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗಿರುವುದು ಕಂಡುಬಂದರೆ, ವಿಚಾರಣೆಯಿಲ್ಲದೆ ಅವರನ್ನು ವಜಾಗೊಳಿಸಲು ಈ ವಿಧಿ ಅವಕಾಶ ಕಲ್ಪಿಸುತ್ತದೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಸಿಐಡಿ) ನೇತೃತ್ವ ಐದು ಸದಸ್ಯರ ಎಸ್ಟಿಎಫ್ ತಂಡ ರಚಿಸಲಾಗಿದೆ. ಈ ತಂಡ ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕಿತ ಸರ್ಕಾರಿ ನೌಕರರನ್ನು ಗುರುತಿಸುವುದು, ಪರಿಶೀಲಿಸುವುದು ಮತ್ತು ದಾಖಲೆಗಳನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿದೆ. ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಕಾರ್ಯಪಡೆಯು ತನ್ನ ಶಿಫಾರಸುಗಳನ್ನು ಸೂಕ್ತ ಕ್ರಮಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸುತ್ತದೆ, ಈ ಮೂಲಕ ಅವರನ್ನು ಸೇವೆಯಿಂದ ವಜಾಗೊಳಿಸಬಹುದು.
.ದೇಗುಲಗಳಲ್ಲಿ ಗೋಶಾಲೆ, ಧರ್ಮಬೋಧನಾ ಸಂಸ್ಥೆ, ಆಸ್ಪತ್ರೆ ಅಗತ್ಯ: ಕೇರಳ ರಾಜ್ಯಪಾಲ.ಶರಣಾಗುವ ಮಾತೇ ಇಲ್ಲ: ಇಸ್ರೇಲ್ ಬೆದರಿಕೆಗೆ ಹಿಜ್ಬುಲ್ಲಾ ಖಡಕ್ ಪ್ರತಿಕ್ರಿಯೆ.
ಭದ್ರತಾ ಸಿಬ್ಬಂದಿ ಅಥವಾ ಜನನಿಬಿಡ ಪ್ರದೇಶಗಳ ಮೇಲಿನ ದಾಳಿಗಳನ್ನು ಯೋಜಿಸುವಲ್ಲಿ ಅಥವಾ ಸುಗಮಗೊಳಿಸುವಲ್ಲಿ ನೇರ ಅಥವಾ ಪರೋಕ್ಷವಾಗಿ ಕೆಲವು ಸರ್ಕಾರಿ ಉದ್ಯೋಗಿಗಳು ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಇತರರು ಉಗ್ರಗಾಮಿ ನಿರ್ವಾಹಕರಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಲು ಅಧಿಕಾರವನ್ನು ಬಳಸಿಕೊಂಡಿದ್ದಾರೆ ಎಂದು ವರದಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಸ್ವಚ್ಛ ಮತ್ತು ಜವಾಬ್ದಾರಿಯುತ ಆಡಳಿತದ ಅಗತ್ಯವಿದ್ದು, ಅಮಾಯಕರಿಗೆ ಹಾನಿ ಮಾಡುವ ಅಥವಾ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಲ್ಲಿ ತೊಡಗಿಕೊಂಡಿರುವವರನ್ನು ಬಿಡುವುದಿಲ್ಲ. ಅಂಥವರಿಗೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.
.ಭಾರತದಲ್ಲಿ ರಾಯಿಟರ್ಸ್ ಎಕ್ಸ್ ಖಾತೆಗೆ ನಿರ್ಬಂಧ: ಕೇಂದ್ರ ಸರ್ಕಾರ ಹೇಳಿದ್ದೇನು?.Dalai Lama Birthday: ದಲೈ ಲಾಮಾ ಅವರ 90ನೇ ಜನ್ಮದಿನಕ್ಕೆ ಪ್ರಧಾನಿ ಮೋದಿ ಶುಭಾಶಯ.ಆಸ್ಟ್ರೇಲಿಯಾದಲ್ಲಿ ಚಿಂಚೋಳಿ ವೈದ್ಯ ಸಾವು: ಮಾಹಿತಿ ಪಡೆದ ಜಿಲ್ಲಾಧಿಕಾರಿ.PHOTOS | NC Classic 2025: ಚಿನ್ನಕ್ಕೆ ಗುರಿಯಿಟ್ಟ ನೀರಜ್; ಅಭಿಮಾನಿಗಳ ಸಂಭ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.